alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯ ಅಡುಗೆ ಕೋಣೆಯಲ್ಲಿತ್ತು 60 ವಿಷಕಾರಿ ಹಾವು…!

ಶಾಲೆಯ ಬಿಸಿಯೂಟದ ಅಡುಗೆ ಕೋಣೆಯಲ್ಲಿ 60 ವಿಷಕಾರಿ ಹಾವುಗಳು ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಬೆಚ್ಚಿ ಬೀಳುವಂತೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹಿಂಗೋಲಿ ಜಿಲ್ಲೆಯ ಪಂಗ್ರಾ ಬೊಖಾರ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅಡುಗೆ ಸಹಾಯಕಿ ಕಟ್ಟಿಗೆಯನ್ನು ತೆಗೆದುಕೊಳ್ಳಲು ಹೋದಾಗ ಮೊದಲಿಗೆ ಎರಡು ಹಾವುಗಳು ಕಂಡುಬಂದಿವೆ.

ಗಾಬರಿಗೊಳಗಾದ ಆಕೆ, ಕೂಡಲೇ ಶಿಕ್ಷಕರಿಗೆ ವಿಷಯ ಮುಟ್ಟಿಸಿದ್ದು, ಮತ್ತಷ್ಟು ಕಟ್ಟಿಗೆಗಳನ್ನು ಸರಿಸಿ ನೋಡಿದಾಗ 58 ಹಾವುಗಳು ಹೊರಬಂದಿವೆ. ಗ್ರಾಮಸ್ಥರೂ ಕೂಡ ಸ್ಥಳಕ್ಕಾಗಮಿಸಿದ್ದು, ಹಾವುಗಳನ್ನು ಕೊಲ್ಲಲು ಮುಂದಾಗಿದ್ದಾರೆ. ಆದರೆ ಅವರನ್ನು ತಡೆದ ಮುಖ್ಯ ಶಿಕ್ಷಕರು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...