alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮ ಅಪ್ಪನಿಗೆ ಬೈತಾಳೆ – ನ್ಯಾಯಾಧೀಶರ ಮುಂದೆ ಬಾಲಕ ಹೇಳ್ದ ಈ ಮಾತು

ಮೊಹಾಲಿ ಸ್ಥಳೀಯ ಕೋರ್ಟ್ ನಲ್ಲಿ 6 ವರ್ಷದ ಬಾಲಕನೊಬ್ಬ ನೀಡಿದ ಹೇಳಿಕೆ ನೆರೆದಿದ್ದವರನ್ನು ಆಶ್ಚರ್ಯಕ್ಕೊಳಪಡಿಸಿತ್ತು. ಆದ್ರೆ ನ್ಯಾಯಾಧೀಶರು ಬಾಲಕನನ್ನು ಹತ್ತಿರ ಕರೆದು ಕೇಳಿದಾಗ ಸತ್ಯ ಹೊರಬಿದ್ದಿದೆ. ಬಾಲಕನಿಗೆ ಈ ಮಾತುಗಳನ್ನು ಹೇಳಿಕೊಡಲಾಗಿದೆ ಎನ್ನುವ ವಿಷ್ಯ ಬಹಿರಂಗವಾಗಿದೆ.

ಅಷ್ಟಕ್ಕೂ ಪತಿ-ಪತ್ನಿ ವಿಚ್ಛೇದನ ವಿಚಾರಕ್ಕೆ ಸಂಬಂಧಿಸಿದಂತೆ ಆರು ವರ್ಷದ ಮಗನ ಹೇಳಿಕೆ ಪಡೆಯಲಾಗಿದೆ. ನ್ಯಾಯಾಧೀಶರ ಮುಂದೆ ಬಂದ ಬಾಲಕ ತಾಯಿ, ತಂದೆಗೆ ಬೈಯುತ್ತಾಳೆಂದಿದ್ದಾನೆ. ಇದನ್ನು ಕೇಳಿದ ನ್ಯಾಯಾಧೀಶರು ಆತನನ್ನು ಬಳಿಗೆ ಕರೆದು ಚಾಕಲೇಟ್ ನೀಡುತ್ತೇನೆ. ಸತ್ಯ ಹೇಳು. ನಿನಗೆ ಯಾರು ಹೀಗೆ ಹೇಳುವಂತೆ ಹೇಳಿದ್ದಾರೆ ಎಂದು ಕೇಳಿದ್ದಾರೆ. ಇದಕ್ಕೆ ತಂದೆ ಎಂದು ಬಾಲಕ ಉತ್ತರ ನೀಡಿದ್ದಾನೆ.

ಆರು ವರ್ಷದ ಮಗ ಹಾಗೂ ಐದು ವರ್ಷದ ಮಗಳಿರುವ ದಂಪತಿ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮಗ ತಂದೆ ಬಳಿಯಿದ್ದರೆ ಮಗಳು ತಾಯಿ ಜೊತೆಗಿದ್ದಾಳೆ. ವಿಚಾರಣೆ ನಂತ್ರ ಸಹೋದರಿಯನ್ನು ತನ್ನ ಜೊತೆ ಕರೆದೊಯ್ಯುವುದಾಗಿ ಬಾಲಕ ಗಲಾಟೆ ಮಾಡಿದ್ದಾನೆ. ಆದ್ರೆ ಇದಕ್ಕೆ ಒಪ್ಪದ ತಾಯಿ ಮಗನನ್ನೇ ತನ್ನ ಜೊತೆ ಕರೆದೊಯ್ದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...