alex Certify
ಕನ್ನಡ ದುನಿಯಾ       Mobile App
       

Kannada Duniya

ಮನಕಲಕುತ್ತೆ ತಂದೆಯ ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತಿರುವ ಬಾಲಕಿಯ ಚಿತ್ರ

ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಯೋಧ ದೀಪಕ್ ನೈನ್ ವಾಲ್ ಮೂಲತಃ ಡೆಹರಾಡೂನಿನವರಾಗಿದ್ದ ಹಿನ್ನೆಲೆಯಲ್ಲಿ, ಅವರ ಪಾರ್ಥಿವ ಶರೀರವನ್ನು ತವರಿಗೆ ತರಲಾಗಿತ್ತು.

ಈ ವೇಳೆ ದೀಪಕ್ ಅವರ ಮೃತ ದೇಹದ ಮುಂದೆ ಅವರ 6 ವರ್ಷದ ಮಗಳು ತಂದೆಯನ್ನು ಕೊನೆ ಬಾರಿ ನೋಡುತ್ತಾ ಕಣ್ಣೀರಿಡುತ್ತಿದ್ದ ದೃಶ್ಯ ಹೃದಯಸ್ಪರ್ಶಿಯಾಗಿತ್ತು. ತಂದೆ ಶರೀರದ ಮುಂದೆ ಮಗಳು ಕಂಬನಿ ಇಟ್ಟು ಗೌರವ ಸಲ್ಲಿಸಿದ್ದು ಎಂಥವರ ಕಣ್ಣಲ್ಲೂ ನೀರು ತರಿಸಿತು.

ಏಪ್ರಿಲ್ 10 ರಂದು ಕುಲ್ಗಾಮ್ ನಲ್ಲಿ ದೀಪಕ್ ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆಗಿಳಿದಿದ್ರು. ಈ ವೇಳೆ ಉಗ್ರರೂ ಕೂಡಾ ಗುಂಡಿನ ಚಕಮಕಿ ನಡೆಸಿದ್ದಾರೆ. ಘಟನೆಯಲ್ಲಿ ದೀಪಕ್ ದೇಹಕ್ಕೆ ಎರಡು ಗುಂಡು ಹೊಕ್ಕಿದ್ದವು. ಪುಣೆ ಕಮ್ಯಾಂಡೊ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಸುಮಾರು ಒಂದು ತಿಂಗಳುಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ ಅವರು ಕಳೆದ ಭಾನುವಾರು ಕೊನೆಯುಸಿರೆಳದಿದ್ದಾರೆ. ಮೃತ ದೀಪಕ್ ಅವರಿಗೆ ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿ ಮತ್ತು ಒಬ್ಬ ಸಹೋದರ ಇದ್ದಾರೆ. ಇವರ ತಂದೆ ಕೂಡಾ ನಿವೃತ್ತ ಕ್ಯಾಪ್ಟನ್ ಆಗಿದ್ದು, ಸಹೋದರ ಕೂಡಾ ಭದ್ರತಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...