alex Certify
ಕನ್ನಡ ದುನಿಯಾ       Mobile App
       

Kannada Duniya

ಹಳಿದಾಟುತ್ತಿದ್ದ ಆನೆಗಳಿಗೆ ಡಿಕ್ಕಿ ಹೊಡೆದ ರೈಲು

ಸೋನಿತ್ ಪುರ: ಹಳಿದಾಟುತ್ತಿದ್ದ ಆನೆಗಳಿಗೆ ಅತಿವೇಗವಾಗಿ ಸಂಚರಿಸುತ್ತಿದ್ದ ರೈಲು ಡಿಕ್ಕಿ ಹೊಡೆದ ಘಟನೆ ಅಸ್ಸಾಂನ ಸೋನಿತ್ ಪುರದ ಬಳಿ ನಡೆದಿದೆ.

ಅಪಘಾತದಲ್ಲಿ 1 ಮರಿಯಾನೆ ಸೇರಿ 6 ಆನೆಗಳು ಸಾವು ಕಂಡಿವೆ. ಬಲಿಪಾರ ಬಳಿ ಆನೆಗಳ ಹಿಂಡು ರೈಲ್ವೇಹಳಿಯನ್ನು ದಾಟುವ ವೇಳೆ ಗುವಾಹಟಿ –ನಹರ್ಲಗನ್ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಆನೆಗಳು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿವೆ. ಘಟನೆ ನಡೆದಿರುವ ಪ್ರದೇಶ ಆನೆಗಳ ವಾಸಸ್ಥಾನವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಶೇ. 70 ರಷ್ಟು ಅರಣ್ಯ ನಾಶವಾಗಿದೆ. ಆಗಾಗ ಆನೆಗಳು ಊರುಗಳತ್ತ ಮುಖ ಮಾಡುತ್ತವೆ.

2013 ರಿಂದ ಇದುವರೆಗೆ ಅಸ್ಸಾಂನಲ್ಲಿ ಸುಮಾರು 140 ಆನೆಗಳು ಸಾವು ಕಂಡಿವೆ. ಅಸ್ಸಾಂನಲ್ಲಿ ಮಾನವ –ಪ್ರಾಣಿ ಸಂಘರ್ಷ ಪ್ರಕರಣ ಹೆಚ್ಚಾಗಿದ್ದು, ವನ್ಯಜೀವಿಗಳಿಗೆ ತೊಂದರೆಯಾಗಿದೆ. ಅಸ್ಸಾಂನಲ್ಲಿರುವ ಏಷ್ಯಾದ ಆನೆಗಳು ಅಳಿವಿನಂಚಿನಲ್ಲಿವೆ ಎಂದು ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ ವೇಷನ್ ಆಫ್ ನೇಚರ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...