alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಮೇಲೆ 5 ತಿಂಗಳಿಂದ ನಡೆಯುತ್ತಿತ್ತು ಅಪ್ರಾಪ್ತರಿಂದ ಅತ್ಯಾಚಾರ

ಮಹಾರಾಷ್ಟ್ರದ ಪುಣೆಯಲ್ಲಿ 8 ವರ್ಷದ ಮುಗ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಕೊಂಡ್ವಾ ಪ್ರದೇಶದಲ್ಲಿ ವಾಸವಾಗಿರುವ ಬಾಲಕಿ ಒಂದನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಪಕ್ಕದ ಮನೆಯ 6 ಹುಡುಗ್ರು ಕಳೆದ 5 ತಿಂಗಳಿಂದ ಈಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಹೊಟ್ಟೆ ನೋವು ಹಾಗೂ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆಕೆ ಅಜ್ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ವೈದ್ಯರ ಮುಂದೆ ಎಲ್ಲವನ್ನೂ ಹೇಳಿದ್ದಾಳೆ ಬಾಲಕಿ. ಕುಟುಂಬಸ್ಥರ ದೂರಿನ ಮೇಲೆ ಶುಕ್ರವಾರ ಬೆಳಿಗ್ಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಅದ್ರಲ್ಲಿ 5 ಮಂದಿ ಅಪ್ರಾಪ್ತರು ಎನ್ನಲಾಗ್ತಿದೆ.

ಆರೋಪಿಗಳೆಲ್ಲ ಬಾಲಕಿ ಮನೆ ಅಕ್ಕಪಕ್ಕದ ಮನೆಯವರಾಗಿದ್ದಾರೆ. ಐದು ಬಾಲಕರ ವಯಸ್ಸು 6-12 ವರ್ಷದೊಳಗಿದೆ. ಒಬ್ಬನ ವಯಸ್ಸು ಮಾತ್ರ 18 ಎಂದು ಪೊಲೀಸರು ಹೇಳಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಡಿ ಮೇಲೆ ಕರೆದುಕೊಂಡು ಹೋಗಿ ಕೆಟ್ಟ ಕೆಲಸ ಮಾಡ್ತಿದ್ದರಂತೆ ಆರೋಪಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...