alex Certify
ಕನ್ನಡ ದುನಿಯಾ       Mobile App
       

Kannada Duniya

ವಿಘ್ನ ವಿನಾಶಕನಿಗಾಗಿ ಸಿದ್ಧವಾಗಿದೆ 580 ಕೆಜಿ ತೂಕದ ಲಡ್ಡು

ದೇಶದೆಲ್ಲೆಡೆ ಈಗ ಮನೆ ಮನೆಗಳಲ್ಲಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಕ್ತರು ಇಷ್ಟದೇವನನ್ನು ಭಕ್ತಿ ಪೂರಕವಾಗಿ ಪೂಜಿಸುತ್ತಿದ್ದಾರೆ. ಹೈದ್ರಾಬಾದ್ ನ ಫಿಲ್ಮ್ ನಗರ್ ನ ದೈವ ಸನ್ನಿಧಾನಮ್ ನಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಗಣಪನಿಗೆ ಸುಮಾರು 580 ಕೆ.ಜಿ. ತೂಕದ ಲಡ್ಡು ವಿಶೇಷವಾಗಿ ಪ್ರಸಾದಕ್ಕೆ ತಯಾರಿಸಲಾಗಿದೆ.

ಈ ಬೃಹತ್ ಲಡ್ಡುಗೆ ಸುಮಾರು 3 ಲಕ್ಷ ಖರ್ಚಾಗಿದ್ದರ ಬಗ್ಗೆ ಅಂದಾಜಿಸಲಾಗಿದೆ. ಕಳೆದ ಬಾರಿ 500 ಕೆ.ಜಿ. ತೂಕದ ಲಡ್ಡು ತಯಾರಿಸಲಾಗಿತ್ತು. ಈ ಬಾರಿ 580 ಕೆ.ಜಿ. ತೂಕದ ಲಡ್ಡು ಭಕ್ತರನ್ನು ಆಕರ್ಷಿಸುತ್ತಿದೆ.

ಈ ಲಡ್ಡು ತಯಾರಿಕೆಗೆ ಸುಮಾರು 220 ಕೆ.ಜಿ. ಸಕ್ಕರೆ, 145 ಕೆ.ಜಿ. ತುಪ್ಪ, 25 ಕೆ.ಜಿ. ಗೋಡಂಬಿ ಹಾಗೂ 13 ಕೆ.ಜಿ. ಬಾದಾಮಿ ಬಳಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...