alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಬರ್ತ್ ಡೇ ಝಲಕ್ ಹೇಗಿತ್ತು? ಇಲ್ಲಿದೆ ರಿಪೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 68ನೇ ಹುಟ್ಟುಹಬ್ಬವನ್ನು ವಾರಣಾಸಿಯಲ್ಲಿ ನೂರು‌ ಸ್ಲಂ ವಿದ್ಯಾರ್ಥಿಗಳು ಸೇರಿದಂತೆ 300 ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡಿದ್ದಾರೆ‌. ಹಾಗೆಯೇ ದೇಶದ ವಿವಿಧ ಭಾಗದಲ್ಲಿ ವಿವಿಧ ರೀತಿಯಲ್ಲಿ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

ಸುಲಭ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹಾಗೂ ಮುಕ್ತಾರ್ ಅಬ್ಬಾಸ್ ಅವರು ದೆಹಲಿಯಲ್ಲಿ 568 ಕೆಜಿ ತೂಕದ ಲಡ್ಡುವನ್ನು ಅನಾವರಣಗೊಳಿಸಿದರು. ಇನ್ನು ಬಿಜೆಪಿ ಮುಖಂಡ ಸುನೀಲ್ ಓಜಾ ಹಾಗೂ ಉತ್ತರ ಪ್ರದೇಶ ಸಚಿವ ನೀಲಕಂಠ ತಿವಾರಿ ಅವರು 68ಕೆಜಿ ತೂಕದ ಕೇಕ್ ನ್ನು ವಾರಣಾಸಿಯಲ್ಲಿ ಕತ್ತರಿಸಿದರು.

ವಾರಣಾಸಿಯ ಕಾಶಿ ವಿಶ್ವನಾಥ ವಿಶೇಷ ಅಭಿವೃದ್ಧಿ ಮಂಡಳಿ ವತಿಯಿಂದ, ಸ್ಚಚ್ಛತೆಯ ಭಾಗವಾಗಿ ಸುಮಾರು 75 ಲಕ್ಷ ಮೌಲ್ಯದ ಸುಗಂಧ ದ್ರವ್ಯಗಳನ್ನು ಗಂಗಾ ಘಾಟ್,‌ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ‌ ಸಿಂಪಡಿಸಿದರೆ, ತಮಿಳುನಾಡು ಬಿಜೆಪಿ ವತಿಯಿಂದ, ಮೋದಿ ಹುಟ್ಟುಹಬ್ಬದಂದು ಜನಿಸಿದ ಹಸುಳೆಗಳಿಗೆ ಬಂಗಾರದ ಉಂಗುರ ಉಡುಗೊರೆಯಾಗಿ ನೀಡಿದೆ.

ಈ ಎಲ್ಲದರ ನಡುವೆ ವಾರಣಾಸಿಯ ಕಾಂಗ್ರೆಸ್ ಸೇವಾ ದಳದ ವತಿಯಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ‌. ಮಣ್ಣಿನ ರಸ್ತೆಯ ರೀತಿಯಲ್ಲಿ ಕೇಕ್ ತಯಾರಿಸಿ, ಸದ್ಯದ ವಾರಣಾಸಿ ರಸ್ತೆಗಳ ಪರಿಸ್ಥಿತಿ ಎಂದು ಮೂದಲಿಸಿದ್ದಾರೆ‌.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...