alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! 12 ವರ್ಷದ ಅಪ್ರಾಪ್ತೆ ಜೊತೆ ಮದುವೆಗೆ ಸಿದ್ದನಾಗಿದ್ದ 51 ರ ವ್ಯಕ್ತಿ

ಮಧ್ಯ ಪ್ರದೇಶದಲ್ಲಿ ಆಘಾತಕಾರಿ ಪ್ರಕರಣವೊಂದು ವರದಿಯಾಗಿದೆ. ಗ್ರಾಮದ ಸರಪಂಚನೊಬ್ಬ ಮೊದಲ ಹೆಂಡತಿ ಇರುವಾಗಲೇ ಬಡ ಕುಟುಂಬದ 12 ವರ್ಷದ ಹುಡುಗಿಯೊಂದಿಗೆ ವಿವಾಹವಾಗಲು ಮುಂದಾಗಿದ್ದ ಅಂಶ ಬೆಳಕಿಗೆ ಬಂದಿದೆ.

ಮೊರೆನಾ ಜಿಲ್ಲೆಯ ಬಹ್ರಾರ್ ಜಾಗೀರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಸರಪಂಚ್ 51 ವರ್ಷದ ಜಗನ್ನಾಥ್ ಮವಾಯಿ, ತನ್ನ ಎರಡನೇ ಮದುವೆಗೆ ಎಲ್ಲ ಸಿದ್ದತೆ ನಡೆಸಿದ್ದು, ಹೆಲಿಕಾಪ್ಟರ್ ನಲ್ಲಿ ವಿವಾಹ ಸಮಾರಂಭಕ್ಕೆ ಬರಬೇಕೆಂಬ ಕಾರಣಕ್ಕೆ ಗ್ರಾಮದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ಆರಂಭಿಸಿದ್ದನೆನ್ನಲಾಗಿದೆ.

ಗ್ರಾಮಸ್ಥರೊಬ್ಬರು ಜಿಲ್ಲಾಡಳಿತಕ್ಕೆ ಬಾಲ್ಯ ವಿವಾಹ ನಡೆಯುತ್ತಿರುವ ಕುರಿತು ದೂರು ನೀಡಿದ್ದು, ತನಿಖೆ ನಡೆಸಿದ ಅಧಿಕಾರಿಗಳಿಗೆ ವಧುವಿನ ವಯಸ್ಸು 12 ವರ್ಷವೆಂದು ದಾಖಲೆಗಳಿಂದ ತಿಳಿದುಬಂದಿದೆ. ಅಧಿಕಾರಿಗಳ ವರದಿ ಆಧಾರದ ಮೇಲೆ ಜಗನ್ನಾಥ್ ಮವಾಯಿಯನ್ನು ಜಿಲ್ಲಾಧಿಕಾರಿಗಳು ಸರಪಂಚ್ ಸ್ಥಾನದಿಂದ ವಜಾಗೊಳಿಸಿದ್ದಾರಲ್ಲದೇ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ನಿಲ್ಲದಂತೆ ಆದೇಶಿಸಿದ್ದಾರೆ. ಜೊತೆಗೆ ಮೊದಲ ಪತ್ನಿಯಿದ್ದರೂ ಕಾನೂನುಬಾಹಿರವಾಗಿ ಎರಡನೇ ವಿವಾಹವಾಗಲು ತಯಾರಾಗಿದ್ದಕ್ಕೆ ಹಾಗೂ ಬಾಲ್ಯ ವಿವಾಹವಾಗಲು ಮುಂದಾಗಿದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...