
ನೋಟು ನಿಷೇಧದ ನಂತ್ರ ಬಗೆ ಬಗೆಯ ಸಮಸ್ಯೆಗಳನ್ನು ಜನರು ಎದುರಿಸ್ತಾ ಇದ್ದಾರೆ. ಒಂದಕ್ಕೆ ಪರಿಹಾರ ಸಿಗ್ತಾ ಇದ್ದಂತೆ ಇನ್ನೊಂದು ಸಮಸ್ಯೆ ಶುರುವಾಗ್ತಾ ಇದೆ. ಎಟಿಎಂನಿಂದ ಹೊರ ಬರ್ತಾ ಇರುವ ಐದು ನೂರು ರೂಪಾಯಿ ನೋಟಿನಲ್ಲಿ ಲೋಪ ಕಾಣಿಸಿಕೊಂಡಿದೆ. ಒಂದೇ ಕಡೆ ಮುದ್ರಣವಾಗಿರುವ ನೋಟೊಂದು ಗ್ರಾಹಕನ ಕೈ ಸೇರಿದೆ.
ಮಧ್ಯಪ್ರದೇಶದ ಮೊಹಮ್ಮದ್ಪುರ ನಿವಾಸಿ ಗಜೇಂದ್ರಸಿಂಹ ಸ್ಟೇಟ್ ಬ್ಯಾಂಕ್ ಎಟಿಎಂಗೆ ಹೋಗಿ 4,500 ರೂಪಾಯಿ ಡ್ರಾ ಮಾಡಿದ್ದಾನೆ. ಇದ್ರಲ್ಲಿ 500 ರೂಪಾಯಿ ಹೊಸ ನೋಟು ಬಂದಿದೆ.
ಆದ್ರೆ ಹೊಸ 500 ರೂಪಾಯಿ ನೋಟು ಒಂದು ಕಡೆ ಮಾತ್ರ ಮುದ್ರಣವಾಗಿದೆ. ಇನ್ನೊಂದು ಕಡೆ ಖಾಲಿ ಇದ್ದು, ತಕ್ಷಣ ಗಜೇಂದ್ರಸಿಂಹ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿದ್ದಾನೆ. ನಿಯಮಗಳ ಅನುಸಾರ ನೋಟು ಬದಲಾವಣೆ ಮಾಡಿಕೊಡುವುದಾಗಿ ಬ್ಯಾಂಕ್ ಹೇಳಿದೆ. ಜೊತೆಗೆ ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.