alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆ ಮುಂಬೈಗೆ ಬರ್ತಿದ್ದಾಳೆ 500 ಕೆಜಿ ತೂಕದ ಮಹಿಳೆ

512992-iman-ahmad-abdulati-hotklop-blogspot-in

ವಿಶ್ವದಲ್ಲೇ ಅತ್ಯಂತ ದಪ್ಪವಿರುವ ಮಹಿಳೆ, 500 ಕೆಜಿ ತೂಕದ ಈಜಿಪ್ಟ್ ನ ಎಮನ್ ಅಹ್ಮದ್ ನಾಳೆ ಬೆಳಗ್ಗೆ ಮುಂಬೈಗೆ ಬಂದಿಳಿಯಲಿದ್ದಾಳೆ. ಸೈಫೀ ಆಸ್ಪತ್ರೆಯಲ್ಲಿ ಎಮನ್ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾಳೆ. ಈಜಿಪ್ಟ್ ಏರ್ ನ ಏರ್ ಬಸ್ 300-600 ಸರಕು ಸಾಗಣೆ ವಿಮಾನದಲ್ಲಿ ಎಮನ್ ಳನ್ನು ಕರೆತರಲಾಗುತ್ತಿದೆ.

ಎಮನ್ ಗೆ ಈಗ 36 ವರ್ಷ, ಈಜಿಪ್ಟ್ ನ ಕೈರೋದಲ್ಲಿ ವಾಸವಾಗಿದ್ದಾಳೆ. ಅತಿಯಾದ ತೂಕ ಹಾಗೂ ಆರೋಗ್ಯ ಸಮಸ್ಯೆಯಿಂದಾಗಿ ಕಳೆದ 25 ವರ್ಷಗಳಿಂದ ನಡೆಯಲು ಆಕೆಗೆ ಸಾಧ್ಯವಾಗ್ತಿಲ್ಲ, ಮನೆಯಿಂದ ಅವಳು ಹೊರಹೋಗಿಲ್ಲ. ಎಮನ್ ಳನ್ನು ಹೊತ್ತು ಅಲೆಗ್ಸಾಂಡ್ರಿಯಾದ ಬೋರ್ಗ್ ಎಲ್ ಅರಬ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ ಬೆಳಗ್ಗೆ 4.10ಕ್ಕೆ ಮುಂಬೈ ತಲುಪಲಿದೆ.

ಎಮನ್ ಅತ್ಯಂತ ತೂಕವಾಗಿರೋದ್ರಿಂದ ಸಾಮಾನ್ಯ ಪ್ರಯಾಣಿಕರ ವಿಮಾನದಲ್ಲಿ ಅವಳನ್ನು ಕರೆತರಲು ಸಾಧ್ಯವಿರಲಿಲ್ಲ, ಹಾಗಾಗಿ ಸರಕು ಸಾಗಣೆ ವಿಮಾನವನ್ನು ಬಳಸಿಕೊಳ್ಳಲಾಗ್ತಿದೆ. ಇನ್ನು ಸೈಫೀ ಆಸ್ಪತ್ರೆಯಲ್ಲಿ ಎಮನ್ ಚಿಕಿತ್ಸೆಗೆಂದೇ ವಿಶೇಷ ಘಟಕ ನಿರ್ಮಿಸಲಾಗಿದೆ. ಉಚಿತವಾಗಿ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗ್ತಿದೆ. ಸುಮಾರು 6 ತಿಂಗಳುಗಳ ಕಾಲ ಆಕೆ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...