alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತೂ ಮುಂಬೈಗೆ ಬಂದ 500 ಕೆಜಿ ತೂಕದ ಮಹಿಳೆ

woman_h8okvy1

ವಿಶ್ವದ ಅತ್ಯಂತ ದಪ್ಪದ ಮಹಿಳೆ, 500 ಕೆಜಿ ತೂಕದ ಈಜಿಪ್ಟ್ ನ ಎಮನ್ ಅಹ್ಮದ್ ಶನಿವಾರ ಬೆಳಿಗ್ಗೆ ಮುಂಬೈಗೆ ಬಂದಿಳಿದಿದ್ದಾಳೆ. ಮುಂಬೈನ ಸೈಫೀ ಆಸ್ಪತ್ರೆಯಲ್ಲಿ 35 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಯಲಿದ್ದು, ನಂತ್ರ ಮೂರು ತಿಂಗಳುಗಳ ಕಾಲ ಚಿಕಿತ್ಸೆ ಪಡೆಯಲಿದ್ದಾಳೆ.

ಈಜಿಪ್ಟ್ ಏರ್ ನ ಏರ್ ಬಸ್ 300-600 ಸರಕು ಸಾಗಣೆ ವಿಮಾನದಲ್ಲಿ ಎಮನ್ ಳನ್ನು ಕರೆತರಲಾಗಿದೆ. ಬೆಳಗಿನ ಜಾವ ನಾಲ್ಕು ಗಂಟೆಗೆ ಎಮನ್ ಮುಂಬೈಗೆ ಬಂದಿದ್ದಾಳೆ. ಇದೇ ಮೊದಲ ಬಾರಿಗೆ ವೈದ್ಯಕೀಯ ಉಪಕರಣಗಳನ್ನು ಟ್ರಕ್ ಗೆ ಅಳವಡಿಸಲಾಗಿದ್ದು, ಇದ್ರಲ್ಲಿ ಎಮನ್ ಳನ್ನು ಆಸ್ಪತ್ರೆಗೆ ಕರೆತರಲಾಗಿದೆ. ಹಿಂದೆ ಒಂದು ಆಂಬುಲೆನ್ಸ್ ಹಾಗೂ ಮುಂದೆ ಪೊಲೀಸ್ ವಾಹನದ ಮಧ್ಯೆ ಎಮನ್ ಳನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆಯಲ್ಲಿ ಎಮನ್ ಗಾಗಿ ವಿಶೇಷ ರೂಂ ವ್ಯವಸ್ಥೆ ಮಾಡಲಾಗಿದೆ.

ಎಮನ್ ಅತ್ಯಂತ ತೂಕವಾಗಿರೋದ್ರಿಂದ ಆಕೆಯನ್ನು ಕರೆತರಲು ಯಾವುದೇ ವಿಮಾನ ಕಂಪನಿ ಒಪ್ಪಿಗೆ ನೀಡಿರಲಿಲ್ಲ. ಎಮನ್ ಸ್ಥಿತಿ ಬಗ್ಗೆ ವೈದ್ಯರು ವಿದೇಶಾಂಗ ಸಚಿವರೊಂದಿಗೆ ಹಂಚಿಕೊಂಡಿದ್ದರು. ಇದಕ್ಕೆ ಸುಷ್ಮಾ ಸ್ವರಾಜ್ ಸ್ಪಂದಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...