alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಸಮಸ್ಯೆ ತಂದೊಡ್ಡಿದ 500, 2000 ರೂ. ನಕಲಿ ನೋಟು

ಕಪ್ಪು ಹಣ ಹಾಗೂ ನಕಲಿ ನೋಟು ನಿಯಂತ್ರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟುಗಳ ಮೇಲೆ ನಿಷೇಧ ಹೇರಿದ್ದರು. ಆದ್ರೆ ನಕಲಿ ನೋಟುಗಳ ಹಾವಳಿ ಈಗ್ಲೂ ನಿಂತಿಲ್ಲ. ನಕಲಿ ನೋಟು ತಯಾರಿಸುತ್ತಿದ್ದ ತಂಡವೊಂದು ಪೊಲೀಸ್ ಕೈಗೆ ಸಿಕ್ಕಿಬಿದ್ದಿದೆ.

ಚಂಡೀಗಢದ ಪಂಚಕುಲಾದಲ್ಲಿ ಪೊಲೀಸರು ನಕಲಿ ನೋಟು ತಯಾರಿಸುತ್ತಿದ್ದ ತಂಡವೊಂದನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು ಲ್ಯಾಪ್ಟಾಪ್, ಸ್ಕ್ಯಾನರ್ ಹಾಗೂ ಪ್ರಿಂಟರ್ ಸಹಾಯದಿಂದ ನಕಲಿ 500 ಹಾಗೂ 2 ಸಾವಿರ ರೂಪಾಯಿ ನೋಟುಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.

ಆರೋಪಿಗಳಿಂದ ಪೊಲೀಸರು 83 ಸಾವಿರ ರೂಪಾಯಿ ನಕಲಿ ನೋಟನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ಮದ್ಯ ಮಾರಾಟ ಕೂಡ ಮಾಡ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆದಿದೆ. ನೋಟು ಮುದ್ರಣದ ಕೆಲ ವಸ್ತುಗಳ ಪತ್ತೆ ಕಾರ್ಯ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...