alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ನಿವಾಸಿಗಳಿಗೆ ಈ ಸೌಲಭ್ಯ ನೀಡಿದೆ ಕೇಜ್ರಿವಾಲ್ ಸರ್ಕಾರ

ದೆಹಲಿಯ ಕೇಜ್ರಿವಾಲ್ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ದೆಹಲಿಯ ಬಹುದೊಡ್ಡ ನ್ಯೂರೋಸೈನ್ಸ್ ಆಸ್ಪತ್ರೆ ಜಿಬಿ ಆಸ್ಪತ್ರೆಯ ಶೇಕಡಾ 50ರಷ್ಟು ಹಾಸಿಗೆಯನ್ನು ದೆಹಲಿ ನಾಗರಿಕರಿಗೆ ಮೀಸಲಿಡಲು ಸೂಚಿಸಿದೆ. ಜಿಬಿ ಆಸ್ಪತ್ರೆಯ ಸುಮಾರು 750 ಹಾಸಿಗೆ ದೆಹಲಿ ನಾಗರಿಕರಿಗೆ ಕಾಯ್ದಿರಿಸಲಾಗುವುದು.

ದೆಹಲಿಯಲಿ ಇತರೆ ಸರ್ಕಾರಿ ಆಸ್ಪತ್ರೆ ಸೂಚನೆ ಮಾಡಿದ ರೋಗಿಗಳಿಗೆ ಜಿಬಿ ಆಸ್ಪತ್ರೆಯ ಈ ಹಾಸಿಗೆ ಸಿಗಲಿದೆ. ದೆಹಲಿ ಸರ್ಕಾರ ಜಿಬಿ ಆಸ್ಪತ್ರೆ ಆಡಳಿತಕ್ಕೆ ಈ ಬಗ್ಗೆ ಸೂಚನೆ ನೀಡಿದೆ.

ನ್ಯೂರೋ ಸಂಬಂಧಿ ಸಮಸ್ಯೆ ಗುಣಪಡಿಸುವ ಆಸ್ಪತ್ರೆಗಳ ಪೈಕಿ ಜಿಬಿ ಆಸ್ಪತ್ರೆ ದೆಹಲಿಯಲ್ಲಿ ದೊಡ್ಡ ಆಸ್ಪತ್ರೆಯಾಗಿದೆ. ಬೇರೆ ರಾಜ್ಯಗಳಿಂದ ಜಿಬಿ ಆಸ್ಪತ್ರೆಗೆ ಬರ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದ್ರಿಂದಾಗಿ ದೆಹಲಿ ಜನರಿಗೆ ಜಿಬಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರಕ್ಕೆ ಬಂದಿರುವುದಾಗಿ ದೆಹಲಿ ಸರ್ಕಾರ ಹೇಳಿದೆ.

ಇದೇ ವೇಳೆ ದೆಹಲಿ ವಾಸಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಉಚಿತ ಚಿಕಿತ್ಸೆ ನೀಡುವ ಯೋಜನೆ ರೂಪಿಸಲಾಗಿದೆ. ಇದ್ರ ಜೊತೆಗೆ ದೆಹಲಿ ನಾಗರಿಕರಿಗೆ ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಮಾತ್ರೆ, ಔಷಧಿಗಳನ್ನು ಉಚಿತವಾಗಿ ನೀಡುವ ನಿರ್ಧಾರವನ್ನು ಕೇಜ್ರಿವಾಲ್ ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...