alex Certify
ಕನ್ನಡ ದುನಿಯಾ       Mobile App
       

Kannada Duniya

ಐಐಟಿ ಪದವೀಧರರು ಉದ್ಯೋಗ ತ್ಯಜಿಸಿ ರಾಜಕೀಯ ಪಕ್ಷ ಕಟ್ಟಿದ್ದೇಕೆ?

ಪ್ರತಿಷ್ಠಿತ ಐಐಟಿಯಲ್ಲಿ ಪದವಿ ಪಡೆದು ಕೈತುಂಬಾ ಸಂಬಳ ಪಡೆಯುತ್ತಿದ್ದ 50 ಮಂದಿ, ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಹೋರಾಡಲು ಉದ್ಯೋಗ ತೊರೆದು ರಾಜಕೀಯ ಪಕ್ಷ ಕಟ್ಟಿದ್ದಾರೆ. ತಮ್ಮ ಪಕ್ಷಕ್ಕೆ ಬಹುಜನ ಆಜಾದ್ ಪಾರ್ಟಿ ಎಂದು ಹೆಸರಿಟ್ಟಿದ್ದು, ಚುನಾವಣಾ ಆಯೋಗದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.

ಈ ಪಕ್ಷದಲ್ಲಿರೋ 50 ಸದಸ್ಯರು ಬೇರೆ ಬೇರೆ ಐಐಟಿಯಲ್ಲಿ ಪದವಿ ಪಡೆದವರು. ಐಐಟಿ ದೆಹಲಿಯಲ್ಲಿ ಪದವಿ ಪಡೆದಿದ್ದ ನವೀನ್ ಕುಮಾರ್ ಈ ಪಕ್ಷದ ನೇತೃತ್ವ ವಹಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಉದ್ದೇಶವನ್ನು ಇವರು ಹೊಂದಿಲ್ಲ.

2020ರ ಬಿಹಾರ ವಿಧಾನಸಭಾ ಚುನಾವಣೆ ಹಾಗೂ ಮುಂಬರುವ ಲೋಕಸಭಾ ಎಲೆಕ್ಷನ್ ಮೇಲೆ ಬಹುಜನ ಆಜಾದ್ ಪಕ್ಷ ಕಣ್ಣಿಟ್ಟಿದೆ. ಈ ಪಕ್ಷದಲ್ಲಿರುವವರೆಲ್ಲ ಬಹುತೇಕ ಎಸ್ ಸಿ, ಎಸ್ಟಿ ಹಾಗೂ ಓಬಿಸಿ ವರ್ಗಕ್ಕೆ ಸೇರಿದವರು. ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ ಅನ್ನೋದು ಇವರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...