alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚಲ್ಲಿ ನೀರು ತರಿಸಿತ್ತು ತಾಯಿ ಪಕ್ಕ ನಿದ್ರಿಸಿದ್ದ ಬಾಲಕನ ಚಿತ್ರ

ಹೈದ್ರಾಬಾದ್ ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿತ್ತು. ಈ ಕುರಿತು ಈಗಾಗಲೇ ನಾವು ವರದಿ ಮಾಡಿದ್ದು, ಕೊನೆಗೂ ಬಾಲಕ,ತಾಯಿ ಪೋಷಕರ ಮಡಿಲು ಸೇರಿದ್ದಾನೆ.

ತಾಯಿಯ ಶವದ ಪಕ್ಕದಲ್ಲೇ 5 ವರ್ಷದ ಬಾಲಕ ನಿದ್ದೆ ಹೋಗಿರೋ ದೃಶ್ಯ ಎಲ್ಲರ ಕಣ್ಣಂಚಿನಲ್ಲೂ ನೀರು ತರಿಸಿತ್ತು. ಆ ಮಹಿಳೆ ಕಾರ್ಡಿಯಾಕ್ ಸಮಸ್ಯೆಯಿಂದ ಬಳಲುತ್ತಿದ್ಲು.

ಭಾನುವಾರ ರಾತ್ರಿ 5 ವರ್ಷದ ಮಗನೊಂದಿಗೆ ಆಸ್ಪತ್ರೆಗೆ ಬಂದಿದ್ದಾಳೆ. ಆಕೆಯ ದೇಹಸ್ಥಿತಿ ತುಂಬಾ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗಲಿಲ್ಲ, ಮಹಿಳೆ ಮೃತಪಟ್ಟಿದ್ದಾಳೆ. ತಾಯಿ ಇನ್ನಿಲ್ಲ ಅನ್ನೋ ಕಹಿ ಸತ್ಯ ಪುಟ್ಟ ಬಾಲಕನ ಅರಿವಿಗೆ ಬಂದಿರಲಿಲ್ಲ.

ಅಮ್ಮನ ಪಕ್ಕದಲ್ಲೇ ಮಲಗಿ ಆತ ನಿದ್ದೆ ಮಾಡುತ್ತಿದ್ದ. ಮೃತದೇಹವನ್ನು ಯಾರಿಗೆ ಒಪ್ಪಿಸಬೇಕು ಎಂಬ ಗೊಂದಲ ಆಸ್ಪತ್ರೆಯವರನ್ನು ಕಾಡುತ್ತಿತ್ತು.  ಯಾಕಂದ್ರೆ 5 ವರ್ಷದ ಪುಟ್ಟ ಮಗನನ್ನು ಬಿಟ್ರೆ ಆಕೆಯ ಕುಟುಂಬದಲ್ಲಿ ಯಾರಿದ್ದಾರೆ ಅನ್ನೋದು ಕೂಡ ಆಸ್ಪತ್ರೆಯವರಿಗೆ ತಿಳಿದಿರಲಿಲ್ಲ.

ಪೊಲೀಸರು ಹಾಗೂ ಎನ್ ಜಿ ಓ ಸಹಾಯದಿಂದ ಕೊನೆಗೂ ಮಹಿಳೆಯ ಕುಟುಂಬದವರನ್ನು ಪತ್ತೆ ಮಾಡಲಾಗಿದೆ. ಅವರಿಗೆ ಮೃತದೇಹ ಹಾಗೂ 5 ವರ್ಷದ ಬಾಲಕನನ್ನು ಹಸ್ತಾಂತರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...