alex Certify
ಕನ್ನಡ ದುನಿಯಾ       Mobile App
       

Kannada Duniya

13 ವರ್ಷದವನ ಜೊತೆ 5 ವರ್ಷದ ಬಾಲಕಿಯ ವಿವಾಹ

child marriageಭಾರತದಲ್ಲಿ ಬಾಲ್ಯ ವಿವಾಹವನ್ನು ನಿರ್ಬಂಧಿಸಲಾಗಿದೆ. ವಿವಾಹಕ್ಕೆ ಯುವಕರಿಗೆ 21 ಹಾಗೂ ಯುವತಿಯರಿಗೆ 18 ವರ್ಷವೆಂದು ನಿಗದಿಪಡಿಸಲಾಗಿದೆ. ಆದರೂ ದೇಶದ ಹಲವೆಡೆ ಈಗಲೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ.

ರಾಜಸ್ಥಾನದ ಜೈಪುರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, 5 ವರ್ಷದ ಬಾಲಕಿಯ ವಿವಾಹವನ್ನು 13 ವರ್ಷದ ಬಾಲಕನ ಜೊತೆ ನೆರವೇರಿಸಲಾಗಿದೆ. ವಿವಾಹವೆಂದರೇನು ಎಂಬುದನ್ನೂ ಅರಿಯದ ಮುಗ್ದ ಬಾಲಕಿ ಜೋರಾಗಿ ಅಳುತ್ತಿದ್ದರೂ ಹಿರಿಯರು ಸಪ್ತಪದಿ ತುಳಿಸಲು ಮುಂದಾದ ವೇಳೆ ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ರಾಮನವಮಿ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎನ್ನಲಾಗಿದ್ದು, ವಿವಾಹ ಬಂಧನಕ್ಕೊಳಗಾದ ಬಹುತೇಕ ಜೋಡಿಗಳು ಅಪ್ರಾಪ್ತ ವಯಸ್ಕರೆಂದು ಹೇಳಲಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜಸ್ಥಾನ ಸರ್ಕಾರ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಆದೇಶ ರವಾನಿಸಿದ್ದು, ಬಾಲ್ಯ ವಿವಾಹದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...