alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಕಾಫ್ ಸಿರಪ್‌ ವ್ಯಸನಕ್ಕೆ ಬಲಿಯಾಯ್ತು ವಾರ್ಡನ್‌ ಜೀವ

ಬಿಹಾರದ ಬಾಲಾಪರಾಧಿ ಗೃಹದಲ್ಲಿ ಕಾಫ್ ಸಿರಪ್ ಅನ್ನು ಮಾದಕದ್ರವ್ಯದಂತೆ ಸೇವಿಸುತ್ತಿದ್ದ ಐವರು ಬಾಲಕರ ಗುಂಪೊಂದು ಅದಕ್ಕೆ ಅಡ್ಡಿಪಡಿಸಿದ ವಾರ್ಡನ್‌ ಹಾಗೂ 17 ವರ್ಷದ ಸಹಕೈದಿಯನ್ನು ಗುಂಡಿಟ್ಟು ಕೊಂದು ಪರಾರಿಯಾಗಿದೆ.

ಬಿಹಾರದ ಪುರ್ನಿಯಾ ಪಟ್ಟಣದ ಬಾಲಾಪರಾಧಿ ಗೃಹದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ನಡೆದ ತಪಾಸಣೆ ವೇಳೆ ಕಾಫ್ ಸಿರಪ್ ಅನ್ನು ಮಕ್ಕಳು ಅಡಗಿಸಿ ಇಟ್ಟುಕೊಂಡಿದ್ದನ್ನು ವಾರ್ಡನ್ ಬಿಜೇಂದ್ರ ಕುಮಾರ್ ಪತ್ತೆ ಹಚ್ಚಿದ್ದರು. ಈ ಹುಡುಗರು ಕಾಫ್ ಸಿರಪ್ ವ್ಯಸನಕ್ಕೀಡಾಗಿದ್ದಾರೆ ಎಂದು ವಾರ್ಡನ್‌ಗೆ 17 ವರ್ಷದ ಸಹ ಕೈದಿ ದೂರು ನೀಡಿದ್ದ.

ಈ ಹಿನ್ನೆಲೆಯಲ್ಲಿ ಐದು ಮಂದಿ ಕಾಫ್ ಸಿರಪ್ ವ್ಯಸನಿಗಳನ್ನು ಬೇರೆ ಬಾಲಮಂದಿರಕ್ಕೆ ವರ್ಗಾಯಿಸಲು ವಾರ್ಡನ್ ಕುಮಾರ್ ಸ್ಥಳೀಯ ಬಾಲಾಪರಾಧ ಮಂಡಳಿಗೆ ಕೋರಿದ್ದರು. ಆ ಬೇಡಿಕೆ ಮಂಜೂರು ಆಗಿತ್ತು. ಈ ವಿಷಯ ತಿಳಿದ ಐವರು ಬಾಲಕರು ಸಿಟ್ಟಿನಿಂದ ವಾರ್ಡನ್ ಹಾಗೂ ಸಹ ಕೈದಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬಳಿಕ ಗಾರ್ಡ್ ಅನ್ನು ಬೆದರಿಸಿ ಗೇಟ್ ಬೀಗ ತೆಗೆಸಿ ಪರಾರಿಯಾಗಿದ್ದಾರೆ.

ಆರೋಪಿ ಬಾಲಕರಲ್ಲಿ ಒಬ್ಬಾತ ಸ್ಥಳೀಯ ಜೆಡಿಯು ನಾಯಕನ ಮಗನೂ ಸೇರಿದ್ದಾನೆ. ಇನ್ನೊಬ್ಬ ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳ ಇತಿಹಾಸ ಹೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದು, ಪರಾರಿಯಾಗಿರುವ ಇವರ ಹುಡುಕಾಟ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...