alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ರೂ. ನಾಣ್ಯ ನಕಲಿಯಾಗಿರಬಹುದು ಎಚ್ಚರ..!

5-rupess

500 ರೂಪಾಯಿಯಾಯ್ತು, 2 ಸಾವಿರ ರೂಪಾಯಿಯಾಯ್ತು ಈಗ 5 ರೂಪಾಯಿ ನಾಣ್ಯದ ಸರದಿ. ರಾಜಸ್ತಾನದ ಉದಯ್ಪುರದ ಬಳಿ  ಐದು ರೂಪಾಯಿ ನಕಲಿ ನಾಣ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯನ್ನೇ ಕಾರ್ಖಾನೆ ಮಾಡಿಕೊಂಡಿದ್ದ ಆರೋಪಿಗಳು ನಕಲಿ ನಾಣ್ಯ ತಯಾರಿಯಲ್ಲಿ ಬ್ಯುಸಿಯಾಗಿದ್ದರು.

ಮನೆಯಲ್ಲಿ 11 ಟನ್ ಭಾರದ ಮಷಿನ್ ಅಳವಡಿಸಲಾಗಿತ್ತು. ಕಳೆದ 11 ತಿಂಗಳಿಂದ ನಾಣ್ಯವನ್ನು ತಯಾರಿಸಲಾಗ್ತಾ ಇತ್ತು. ನಕಲಿ ನಾಣ್ಯ ತಯಾರಿ ಮಾಡ್ತಿದ್ದ ಆರೋಪಿ ಒಂದು ನಾಣ್ಯಕ್ಕೆ ನಾಲ್ಕು ರೂಪಾಯಿ ಲಾಭ ಗಳಿಸ್ತಾ ಇದ್ದ. ಪೊಲೀಸ್ ಪ್ರಕಾರ ಲಲಿತ್ ಸೇನ್ ಎಂಬಾತ ಶಿವಲಾಲ್ ಸೇನಿ ಎಂಬಾತನ ಜೊತೆ ಸೇರಿ 2 ಲಕ್ಷದ 93 ಸಾವಿರ ರೂಪಾಯಿಗೆ 11 ಟನ್ ಭಾರದ ಮಷಿನ್ ಖರೀದಿ ಮಾಡಿ ತಂದಿದ್ದ. ಲಲಿತ್ ಮನೆಯಲ್ಲಿ ಮಷಿನ್ ಅಳವಡಿಸಿದ್ದ ಶಿವಲಾಲ್ ನಾಣ್ಯ ತಯಾರಿಕೆಗೆ ಬೇಕಾದ ವಸ್ತುಗಳನ್ನು ತಂದಿದ್ದ. ನಂತ್ರ ನಾಣ್ಯ ತಯಾರಿಸ್ತಾ ಇದ್ದ ಅವರು ಮೂಟೆಯಲ್ಲಿ ತುಂಬಿ ಟೋಲ್ ಹಾಗೂ ಮಾರುಕಟ್ಟೆಯಲ್ಲಿ ವಿನಿಮಯ ಮಾಡ್ತಾ ಇದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...