alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರನ್ನು 24 ಗಂಟೆಯಲ್ಲೇ ಪತ್ತೆ ಹಚ್ಚಿದ ಪೊಲೀಸರು

ದಕ್ಷಿಣ ಮುಂಬಯಿಯಿಂದ ಕಾಣೆಯಾಗಿದ್ದ 5 ಮಂದಿ ವಿದ್ಯಾರ್ಥಿನಿಯರ ಪೈಕಿ, ನಾಲ್ವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮುಂಬಯಿ ಉಪನಗರ ರೈಲು ನಿಲ್ದಾಣದ ಕುರ್ಲಾ ನಿಲ್ದಾಣದಲ್ಲಿ ಶನಿವಾರ ನಾಲ್ವರನ್ನು ಪತ್ತೆ ಹಚ್ಚಲಾಗಿದೆ.

ಕೊಲಾಬದಲ್ಲಿನ 8ನೇ ತರಗತಿಯಲ್ಲಿ ಕಲಿಯುತ್ತಿರುವ 5 ವಿದ್ಯಾರ್ಥಿನಿಯರು ಶುಕ್ರವಾರ ಮಧ್ಯಾಹ್ನದ ಬಳಿಕ ಕಾಣೆಯಾಗಿದ್ದರು. ಐವರಲ್ಲಿ 2-3 ಮಂದಿ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರು ಎಂದು ಶಿಕ್ಷಕರು ಮಾಹಿತಿ ನೀಡಿದ್ದರು.

ವಿದ್ಯಾರ್ಥಿನಿಯರನ್ನು ಹುಡುಕುವ ಕಾರ್ಯಕ್ಕಿಳಿದ ಪೊಲೀಸರು, ಶನಿವಾರ ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ನಾಲ್ವರನ್ನು ಪತ್ತೆ ಹಚ್ಚಿದ್ದರು. ಐವರು ಬಾಲಕಿಯರಲ್ಲಿ ಮೊಬೈಲ್‌ ಫೋನ್‌ ಇಲ್ಲದೇ ಇದ್ದುದು ಮಕ್ಕಳನ್ನು ಕಂಡು ಹಿಡಿಯುವುದು ಕಷ್ಟವಾಗಿತ್ತು.

ನಾಲ್ವರು ಬಾಲಕಿಯರನ್ನು ವಿಚಾರಣೆ ನಡೆಸಿದಾಗ, ಮೊದಲು ಮರೀನ್‌ ಡ್ರೈವ್‌, ಹ್ಯಾಂಗಿಂಗ್‌ ಗಾರ್ಡನ್‌ ಹಾಗೂ ಥಾನೆಗೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಮಕ್ಕಳು ಯಾಕಾಗಿ ಮನೆಗೆ ಹಿಂದಿರುಗಿಲ್ಲ ಎಂಬ ವಿಷಯವನ್ನು ಪೊಲೀಸರು ತಿಳಿಸಿಲ್ಲ. ಐದನೇ ಹುಡುಗಿಯನ್ನೂ ಈಗ ಪೊಲೀಸರು ಪತ್ತೆ ಹಚ್ಚಿದ್ದಾರೆಂದು ಹೇಳಲಾಗಿದೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...