alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಂಚಣಿಗಾಗಿ ತಾಯಿಯ ಶವವನ್ನು 5 ತಿಂಗಳಿಂದ ಮುಚ್ಚಿಟ್ಟಿದ್ದ ಮಕ್ಕಳು

ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿರುವ ಘಟನೆಯೊಂದು ಮನು ಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ತಾಯಿಯ ಪಿಂಚಣಿ ಹಣ ಪಡೆಯುವ ಸಲುವಾಗಿ ಐವರು ಮಕ್ಕಳು, ಆಕೆ ಮೃತಪಟ್ಟು ಐದು ತಿಂಗಳು ಕಳೆದರೂ ಶವವನ್ನು ಬಚ್ಚಿಟ್ಟಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಇತ್ತೀಚೆಗೆ ವಾರಣಾಸಿಯ ಬೇಲ್ ಪುರ್ ಏರಿಯಾದ ಕರೀಂನಗರ ನಿವಾಸಿಗಳು ದುರ್ವಾಸನೆ ಬರುತ್ತಿರುವ ಕುರಿತು ದೂರು ನೀಡಿದ್ದರು. ಇದರ ತನಿಖೆಗೆಂದು ಬಂದ ಪೊಲೀಸರಿಗೆ ಆಘಾತವಾಗಿತ್ತು.

ರವಿಪ್ರಕಾಶ್, ದೇವಪ್ರಕಾಶ್, ಯೋಗೇಶ್ವರ್ ಪ್ರಕಾಶ್, ಜ್ಯೋತಿ ಪ್ರಕಾಶ್ ಹಾಗೂ ಗಿರೀಶ್ ಪ್ರಕಾಶ್ ಎಂಬ ಐವರು ತಮ್ಮ ತಾಯಿ ಜನವರಿ 13ರಂದೇ ಸಾವನ್ನಪ್ಪಿದ್ದರೂ ಆಕೆಗೆ ಬರುತ್ತಿದ್ದ 40 ಸಾವಿರ ರೂ. ಪಿಂಚಣಿ ಹಣಕ್ಕಾಗಿ ಶವವನ್ನು ರಾಸಾಯನಿಕಗಳ ಸಹಾಯದಿಂದ ಕೆಡದಂತೆ ಸಂರಕ್ಷಿಸಿಟ್ಟಿರುವುದು ಕಂಡುಬಂದಿತ್ತು.

ಜೊತೆಗೆ ಮೃತ ದೇಹದ ಬೆರಳಿಗೆ ಶಾಹಿ ಹಚ್ಚಿ ಅಗತ್ಯ ದಾಖಲೆಗೆ ಹೆಬ್ಬೆಟ್ಟು ಮುದ್ರೆ ಒತ್ತುವ ಮೂಲಕ ಪ್ರತಿ ತಿಂಗಳು ತಪ್ಪದೆ ಇವರುಗಳು ಪಿಂಚಣಿ ಹಣ ಪಡೆಯುತ್ತಿದ್ದರು. ಇದೀಗ ಐವರು ಸಹೋದರರ ತಾಯಿ ಅಮರಾವತಿ ದೇವಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...