alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿಯಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ 5 ಮಂದಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರದಂದು ನಡೆದ ಹೋಳಿ ಆಚರಣೆ ವೇಳೆ ಐದು ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಈ ಎಲ್ಲ ಪ್ರಕರಣಗಳು ಹೋಳಿ ಆಚರಣೆಗೆ ಸಂಬಂಧಿಸಿಲ್ಲವೆಂದು ಪೊಲೀಸರು ಹೇಳಿದ್ದು, ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ಸಂಖ್ಯೆಯಲ್ಲಿ ಈ ಬಾರಿ ಏರಿಕೆಯಾಗಿದೆ ಎಂದಿದ್ದಾರೆ.

ನವದೆಹಲಿಯಲ್ಲಿ ಕಳೆದ ವರ್ಷ ಪ್ರತಿನಿತ್ಯ ನಾಲ್ವರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದು, ಹೋಳಿ ಸಂದರ್ಭದಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಈ ಬಾರಿ ಐದು ಮಂದಿ ಸಾವನ್ನಪ್ಪಿದ್ದರೂ ಎಲ್ಲವೂ ಹೋಳಿ ಕಾರಣಕ್ಕೆ ಅಲ್ಲವೆಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಸಾವನ್ನಪ್ಪಿದವರ ಪೈಕಿ ಇಬ್ಬರು ಪಾದಚಾರಿಗಳಾಗಿದ್ದು, ಮೂರು ಅಪಘಾತ ಪ್ರಕರಣಗಳು ಹೋಳಿ ಆಚರಣೆಗೆ ಸಂಬಂಧಿಸಿದಂತೆ ಕಂಡು ಬರುತ್ತಿದ್ದು, ತನಿಖೆ ಬಳಿಕ ಸತ್ಯ ಬಹಿರಂಗವಾಗಲಿದೆ ಎಂದಿದ್ದಾರೆ. 2017 ರಲ್ಲಿ ಹೋಳಿ ದಿನದಂದು ಮದ್ಯಪಾನ ಮಾಡಿ ವಾಹನ ಚಲಾಯಿಸಿದ 1,418 ಪ್ರಕರಣಗಳು ದಾಖಲಾಗಿದ್ದರೆ ಈ ಬಾರಿ 1,918 ಪ್ರಕರಣಗಳು ನಡೆದಿವೆ ಎನ್ನಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...