alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ಇಸ್ರೋ ಉಪಗ್ರಹಗಳ ನೆರವು

ಚೆನ್ನೈ: ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕ್ಷಿಪ್ರಗೊಳಿಸುವಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸುತ್ತಿದೆ. ಇಸ್ರೋದ ಓಸಿಯನ್‌ಸ್ಯಾಟ್‌-2, ರಿಸೋರ್ಸ್‌ಸ್ಯಾಟ್‌-2, ಕಾರ್ಟೋಸ್ಯಾಟ್‌-2 ಹಾಗೂ 2ಎ ಹಾಗೂ ಇನ್‌ಸ್ಯಾಟ್‌ 3ಡಿಆರ್‌ ಒಟ್ಟು 5 ಉಪಗ್ರಹಗಳು ನಿರಂತರ ಮಾಹಿತಿ ರವಾನಿಸುತ್ತಿದೆ.

ಇದರಿಂದ ಪ್ರವಾಹ ಮುನ್ಸೂಚನೆ ಲಭಿಸುತ್ತಿದ್ದು, ಪರಿಹಾರ ಕಾರ್ಯಗಳ ವೇಗ ಹೆಚ್ಚಿಸಲು ಸಹಕಾರಿಯಾಗುತ್ತಿದೆ. ಪ್ರವಾಹ ಮುನ್ಸೂಚನೆ ಮೊದಲೇ ಸಿಗುತ್ತಿರುವುದರಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ರಕ್ಷಣಾ ತಂಡಗಳಿಗೆ ಅನುಕೂಲವಾಗುತ್ತಿದೆ.

ಮಳೆ ಬರುತ್ತಿರುವ ಹಾಗೂ ಮಳೆ ಬಂದ ಬಳಿಕದ ಭಾಗಗಳಲ್ಲಿನ ಚಿತ್ರಗಳು, ಮಾಹಿತಿಗಳನ್ನು ಉಪಗ್ರಹ ಕಳುಹಿಸುತ್ತಿದೆ. ಇದೇ ವೇಳೆ ಮುಂದಿನ ಸಲ ಮಳೆ ಬರುವ ಸಮಯದ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ ಹಾಗೂ ಡಿಸಿಷನ್‌ ಸಪೋರ್ಟ್‌ ಸೆಂಟರ್‌ಗೆ ಉಪಗ್ರಹಗಳು ನಿರಂತರ ಮಾಹಿತಿ ರವಾನಿಸುತ್ತಿದ್ದು, ಇಲ್ಲಿಂದ ರಕ್ಷಣಾ ತಂಡ, ಹವಾಮಾನ ಇಲಾಖೆ ಸೇರಿ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ.

ಇನ್‌ಸ್ಯಾಡ್‌ 3ಡಿಆರ್‌ ಉಪಗ್ರಹ ಆಧುನಿಕ ಹವಾಮಾನ ಉಪಗ್ರಹವಾಗಿದ್ದು, ಶಬ್ಧ ಹಾಗೂ ತಾಪಮಾನ, ತೇವಾಂಶ ಇತ್ಯಾದಿ ಮಾಹಿತಿ ನೀಡಬಲ್ಲದು. ಉಪಗ್ರಹಗಳು ನಿರಂತರವಾಗಿ ಚಿತ್ರಗಳನ್ನು ಕಳಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಅರಬ್ಬೀ ಸಮುದ್ರದಲ್ಲಿ ಮಾರುತಗಳ ಚಲನೆಯನ್ನು ತಿಳಿಯಲು ಉಪಕರಣಗಳನ್ನು ಅಳವಡಿಸಲಾಗಿತ್ತು, ಉಪಗ್ರಹಗಳ ಚಿತ್ರವನ್ನು ಇದಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ. ಇದರಿಂದ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...