alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನು ನಿಗಮ್ ಹಾಡಿದ್ದಕ್ಕೆ ಕೆಲಸ ಕಳೆದುಕೊಂಡ ಗಗನ ಸಖಿಯರು !

sonu-nigan-story_647_020516094639

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರಿಗೆ ಕಾನೂನು ಬಾಹಿರವಾಗಿ ವಿಮಾನದಲ್ಲಿ ಹಾಡಲು ಅವಕಾಶ ನೀಡಿದ ತಪ್ಪಿಗೆ ಐವರು ಗಗನ ಸಖಿಯರು ಕೆಲಸ ಕಳೆದುಕೊಂಡ ಘಟನೆ ನಡೆದಿದೆ.

ಜನವರಿ 4 ರಂದು ಸೋನು ನಿಗಮ್ ತಮ್ಮ ಖಾಸಗಿ ಕಾರ್ಯಕ್ರಮ ಮುಗಿಸಿ ಜೋಧ್ ಪುರನಿಂದ ಮುಂಬೈಗೆ ಜೆಟ್ ಏರ್ವೇಸ್ ವಿಮಾನದಲ್ಲಿ ಮರಳುತ್ತಿದ್ದರು. ಈ ಸಮಯದಲ್ಲಿ ಸಹ ಪ್ರಯಾಣಿಕರ ಒತ್ತಾಯದ ಮೇರೆಗೆ ಸೋನು ನಿಗಮ್ ಹಾಡಲು ಮುಂದಾಗಿದ್ದು, ವಿಮಾನದಲ್ಲಿದ್ದ ಗಗನಸಖಿಯರು ಇದನ್ನು ತಡೆಯುವ ಬದಲಾಗಿ ನಿಯಮವನ್ನು ಉಲ್ಲಂಘಿಸಿ ಸೋನು ನಿಗಮ್ ಅವರಿಗೆ ಮೈಕ್ ನೀಡಿ ಹಾಡಲು ಅವಕಾಶ ಕಲ್ಪಿಸಿದ್ದಾರೆ.

ಸಿಕ್ಕ ಅವಕಾಶವನ್ನು ಬಳಸಿಕೊಂಡ ಸೋನು ನಿಗಮ್, ಹಿಂದಿ ಚಿತ್ರದ ಎರಡು ಹಾಡುಗಳನ್ನು ಹಾಡಿದ್ದು ಈ ಹಾಡಿನ ತುಣುಕನ್ನು ಸಹ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ಗಗನಸಖಿಯರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...