alex Certify
ಕನ್ನಡ ದುನಿಯಾ       Mobile App
       

Kannada Duniya

4,800 ಶಾಲಾ ಮಕ್ಳಿಗೆ ಸಿಕ್ತು ಕಾಲೇಜು ಸ್ಕಾಲರ್‌ಶಿಪ್…!

ತಮಿಳುನಾಡಿನಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇತರೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಇರುವ ಸರ್ಕಾರಿ ಸ್ಕಾಲರ್‌ಶಿಪ್ ಅನ್ನು ಕನಿಷ್ಠವೆಂದರೂ 4,800 ಚಿಕ್ಕಮಕ್ಕಳು (14 ವರ್ಷಕ್ಕಿಂತ ಕೆಳಗಿನವರು) ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ ಅನ್ನು 55 ವರ್ಷ ಮೇಲ್ಪಟ್ಟ 2,100 ಮಂದಿ ಗಿಟ್ಟಿಸಿಕೊಂಡಿದ್ದಾರೆ!

ಈ ಸ್ಕಾಲರ್‌ಶಿಪ್‌ಗಳು ಬಡ, ದಲಿತ ಮಕ್ಕಳಿಗೆ ಸಲ್ಲಬೇಕಿತ್ತು. ಈ ಹಗರಣ ನಡೆದಿದ್ದು 2012 ಮತ್ತು 2017ರ ಮಧ್ಯೆ ಎಂಬುದಾಗಿ ಅಧಿಕೃತ ದಾಖಲೆಗಳು ತೋರಿಸುತ್ತಿವೆ.

ಈ ಸ್ಕಾಲರ್‌ಶಿಪ್ ಹಗರಣದಿಂದ 20 ಕೋಟಿ ರೂ. ನಷ್ಟು ನಷ್ಟವಾಗಿರಬಹುದು ಎಂದು ಆಡಿಟ್ ಸಮೀಕ್ಷೆಯಲ್ಲಿ ಖಚಿತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ತಮಿಳುನಾಡಿನ ಆದಿ ದ್ರಾವಿಡ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಓಟೆಮ್ ದಾಯ್ ಅವರನ್ನು ಸಂಪರ್ಕಿಸಿದಾಗ, ಆಡಿಟ್ ವರದಿಯ ಪ್ರತಿ ಇನ್ನೂ ತಲುಪಿಲಿಲ್ಲ ಎಂದಿದ್ದಾರೆ.

ಅನೇಕ ಕಾಲೇಜುಗಳು ಆನ್‌ಲೈನ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ವೇಳೆ ತಿರುಚಿವೆ, ಡುಪ್ಲಿಕೇಟ್ ಎಂಟ್ರಿಗಳನ್ನು ಅಪ್‌ಲೋಡ್ ಮಾಡಿವೆ. ಹೀಗೆ ಮಾಡುವ ಮೂಲಕ 14 ವರ್ಷಕ್ಕಿಂತ ಕೆಳಗಿನವರು ಹಾಗೂ 55 ವರ್ಷಕ್ಕಿಂತ ಮೇಲಿನ ಅನರ್ಹ ಅಭ್ಯರ್ಥಿಗಳು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...