alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ: ಹಿಂದೂಯೇತರ 44 ಸಿಬ್ಬಂದಿ ಹೊರಕ್ಕೆ

ತಿರುಪತಿ : ತಿರುಪತಿ ತಿರುಮಲ ದೇವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿಂದೂಯೇತರ 44 ಸಿಬ್ಬಂದಿಗೆ ಗೇಟ್ ಪಾಸ್ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ.

ದೇವಾಲಯದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರ ಮಹಿಳಾ ಅಧಿಕಾರಿ ದೇವಸ್ಥಾನದ ಅಧಿಕೃತ ವಾಹನದಲ್ಲಿ ಪ್ರತಿದಿನ ಚರ್ಚ್ ಗಳಿಗೆ ಹೋಗಿ ಬರುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾಗಿ ವಿವಾದ ಸೃಷ್ಠಿಸಿತ್ತು.

ತಿರುಪತಿ ತಿರುಮಲ ದೇವಸ್ಥಾನಂ ಮಂಡಳಿಯ ನಿಯಮಾವಳಿ ಅನುಸಾರ ಹಿಂದೂಯೇತರರಿಗೆ ಕೆಲಸ ಮಾಡಲು ಅವಕಾಶವಿಲ್ಲ. ಹಿಂದೂಯೇತರರು ಭೇಟಿ ನೀಡಿದ ಸಂದರ್ಭದಲ್ಲಿ ದೇವರ ಮೇಲೆ ನಂಬಿಕೆ ಇದೆ ಎಂದು ಘೋಷಿಸಬೇಕಿದೆ. ಆದರೂ, ಈ ನಿಯಮ ಉಲ್ಲಂಘಿಸಿ 44 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರನ್ನು ರಾಜ್ಯ ಸರ್ಕಾರದ ಬೇರೆ ಹುದ್ದೆಗಳಿಗೆ ನಿಯೋಜನೆ ಮಾಡಲಾಗುವುದು ಎಂದು ಟಿ.ಟಿ.ಡಿ. ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಲ್ ತಿಳಿಸಿದ್ದಾರೆ.

ಇನ್ನು ಮುಂದೆ ದೇವಾಲಯದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ನಾಮ ಹಾಕಬೇಕೆಂಬ ನಿಯಮ ಜಾರಿಗೆ ಚಿಂತನೆ ನಡೆದಿದೆ. ಶೈಕ್ಷಣಿಕ ಸಂಸ್ಥೆ ಹೊರತುಪಡಿಸಿ ಟಿ.ಟಿ.ಡಿ. ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಹಿಂದೂಯೇತರರಿಗೆ ನೇಮಕಾತಿಗೆ ಅವಕಾಶವಿಲ್ಲ. ಹೀಗಿದ್ದರೂ, ಕೆಲವೊಂದು ಸಂದರ್ಭದಲ್ಲಿ ಹಿಂದೂಯೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...