alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಡಿಲಿನ ಫೋಟೋ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ಪ್ರಕೃತಿಗೆ ಸವಾಲೆಸೆಯಲು ಹೋಗಿ ತಾವೇ ತಮ್ಮ ಅಂತ್ಯ ಕಂಡಿದ್ದಾರೆ. 43 ವರ್ಷದ ರಮೇಶ್ ಎಂಬ ವ್ಯಕ್ತಿ ಸಿಡಿಲಿನ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಕ್ಲಿಕ್ಕಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ಮೃತ ವ್ಯಕ್ತಿ ಚೆನ್ನೈನವರಾಗಿದ್ದು, ತಿರುವಳ್ಳುರ್ ಜಿಲ್ಲೆಯಲ್ಲಿರುವ ಅವರ ಸ್ನೇಹಿತನ ತೋಟದ ಮನೆಯ ಬಳಿ ಘಟನೆ ನಡೆದಿದೆ.

ತೋಟದ ಮನೆಯಲ್ಲಿದ್ದ ರಮೇಶ್ ಸಿಡಿಲು, ಮಿಂಚು ಬರುತ್ತಿರುವುದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಆದರೆ ದುರಾದೃಷ್ಟವಶಾತ್ ಈ ವೇಳೆ ಸಿಡಿಲು ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಿರುವಳ್ಳುರ್ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಗುಡುಗು-ಮಿಂಚು-ಸಿಡಿಲಿನ ಆರ್ಭಟ ಜೋರಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಇಬ್ಬರು ವ್ಯಕ್ತಿಗಳು ಸಿಡಿಲಿಗೆ ಬಲಿಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...