alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಿ ಅಂಗಡಿಯಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ…! ಆರೋಪಿಗಳು ಜೈಲಿಗೆ

ಬಿಹಾರದ ಶಿಕ್ಷಣ ಇಲಾಖೆಯನ್ನ ಭಾರೀ ಮುಜುಗರಕ್ಕೆ ಈಡುಮಾಡಿದ್ದ ಉತ್ತರ ಪತ್ರಿಕೆಗಳ ನಾಪತ್ತೆ ಪ್ರಕರಣದ ಇಬ್ಬರು ಆರೋಪಿಗಳ ವಿಚಾರಣೆಯನ್ನ ವಿಶೇಷ ತನಿಖಾ ತಂಡ ಪೂರ್ಣಗೊಳಿಸಿದೆ.

ಮೌಲ್ಯಮಾಪನಕ್ಕೊಳಪಟ್ಟ 40,000 ಉತ್ತರ ಪತ್ರಿಕೆಗಳು ಇಬ್ಬರು ಗುಜರಿ ವ್ಯಾಪಾರಿಗಳ ಬಳಿ ಪತ್ತೆಯಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಇಡೀ ಪ್ರಕರಣದಲ್ಲಿ ಮೇಜರ್ ರೋಲ್ ಪ್ಲೇ ಮಾಡಿರೋದು ಶಾಲೆಯೊಂದರ ಗುಮಾಸ್ತ ಅನ್ನೋ ವಿಚಾರ ಬೆಳಕಿಗೆ ಬಂದಿತ್ತು.

ಆತನೇ ಗುಜರಿ ವ್ಯಾಪಾರಿಗಳಿಗೆ ಉತ್ತರ ಪತ್ರಿಕೆಗಳನ್ನ ಮಾರಿದ್ದ ಅಂತ ಹೇಳಲಾಗ್ತಿದೆ. ಆತನ ಉದ್ದೇಶ ಏನಾಗಿತ್ತು ಅನ್ನೋದನ್ನ ತಿಳಿದುಕೊಳ್ಳೋ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ್ದಾರೆ. ಸಿಕ್ಕಿರುವ ಉತ್ತರ ಪತ್ರಿಕೆಗಳ ಪೈಕಿ ಹೆಚ್ಚು ಅಂಕ ಪಡೆದಿರೋ ವಿದ್ಯಾರ್ಥಿಗಳು ಯಾರು ಅನ್ನೋದ್ರ ಪರಿಶೀಲನೆಯಲ್ಲಿದ್ದಾರೆ.

ಎಸ್ಎಸ್ ಗರ್ಲ್ಸ್ ಹೈಸ್ಕೂಲ್ನಲ್ಲಿ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ದೊಡ್ಡ ಬ್ಯಾಗ್ಗಳಲ್ಲಿ ಇಡಲಾಗಿತ್ತು. ಅಲ್ಲಿಂದಲೇ ಉತ್ತರ ಪತ್ರಿಕೆಗಳಿದ್ದ ಬ್ಯಾಗ್ ಮಿಸ್ ಆಗಿತ್ತು. ಈ ಸಂಬಂಧ ಶಾಲೆಯ ಪ್ರಿನ್ಸಿಪಾಲರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಹಾಗಾಗಿ ಈ ಹಿಂದೆಯೇ ಘೋಷಣೆಯಾಗಬೇಕಿದ್ದ 10ನೇ ತರಗತಿಯ ಫಲಿತಾಂಶವನ್ನ ಜೂನ್ 26 ಕ್ಕೆ ಮುಂದೂಡಲಾಗಿತ್ತು. 2018 ರ ಫೆಬ್ರವರಿಯಲ್ಲಿ ನಡೆದಿದ್ದ 10 ನೇ ತರಗತಿಯ ಬೋರ್ಡ್  ಎಕ್ಸಾಮ್ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...