alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ 72 ಗಂಟೆಯಲ್ಲಿ 46 ಮಂದಿ ಸಾವು

ಗೋರಕ್ಪುರದ ಬಿಆರ್ ಡಿ ಕಾಲೇಜಿನಲ್ಲಿ ಮತ್ತೆ ಸಾವಿನ ಸರಣಿ ಶುರುವಾಗಿದೆ. ಕಳೆದ 72 ಗಂಟೆಗಳಲ್ಲಿ 46 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಕಾಲೇಜಿನ ಪ್ರಾಂಶುಪಾಲ ಪಿ.ಕೆ. ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೃತರಲ್ಲಿ 11 ಮಕ್ಕಳು ಸೇರಿದ್ದಾರೆ.

ಸಾವಿಗೆ ಎನ್ಸೆಫಾಲಿಟಿಸ್ ಕಾರಣವೆನ್ನಲಾಗ್ತಿದೆ. ಆದ್ರೆ ಸಾವನ್ನಪ್ಪಿದ ಕೆಲ ವ್ಯಕ್ತಿಗಳಲ್ಲಿ ಎನ್ಸೆಫಾಲಿಟಿಸ್ ಸೋಂಕಿಲ್ಲವೆಂದು ಪಿ.ಕೆ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಶನಿವಾರ ರಾತ್ರಿ 12 ಗಂಟೆಯಿಂದ ಭಾನುವಾರ ರಾತ್ರಿ 12 ಗಂಟೆಯವರೆಗೆ ಎನ್ ಐಸಿಯುವಿನಲ್ಲಿದ್ದ 6 ಮಂದಿ ಹಾಗೂ ಐಸಿಯುವಿನಲ್ಲಿದ್ದ 11 ಮಂದಿ ಸಾವನ್ನಪ್ಪಿದ್ದಾರಂತೆ. ರವಿವಾರದ ನಂತ್ರ ಸಂಖ್ಯೆ ಹೆಚ್ಚಾಗಿದೆ. ಎನ್ ಐಸಿಯುವಿನಲ್ಲಿ 10 ಮಂದಿ ಹಾಗೂ ಐಸಿಯುವಿನಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. 48 ಗಂಟೆಯೊಳಗೆ 42 ಮಂದಿ ಸಾವನ್ನಪ್ಪಿದ್ದಾರೆ.

ಇದ್ರಲ್ಲಿ 7 ಮಂದಿ ಮಾತ್ರ ಎನ್ಸೆಫಾಲಿಟಿಸ್ ನಿಂದ ಸಾವನ್ನಪ್ಪಿದ್ದಾರೆ. ಉಳಿದವರು ಬೇರೆ ಬೇರೆ ಕಾರಣಕ್ಕೆ ಸಾವನ್ನಪ್ಪಿದ್ದಾರೆಂದು ಪ್ರಾಂಶುಪಾಲರು ಹೇಳಿದ್ದಾರೆ. 72 ಗಂಟೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಹವಾಮಾನ ಹರಡಿದ ಸೋಂಕು ಮುಖ್ಯ ಕಾರಣ ಎಂದವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...