alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಿಂಗ್ ವೆಬ್ ಸೈಟ್ ಗೆ ಭೇಟಿ ನೀಡ್ತಿರಾ? ಹಾಗಿದ್ರೆ ಈ ಸುದ್ದಿ ಓದಿ

ಮುಂಬೈನಲ್ಲಿ 41 ವರ್ಷದ ವಿವಾಹಿತನೊಬ್ಬ, ಸುಂದರ ಹುಡುಗಿಯ ಸಂಗಕ್ಕೆ ಹಾತೊರೆದು ಬರೋಬ್ಬರಿ 12.55 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾನೆ. ಅತ್ತ ಹುಡುಗಿಯೂ ಸಿಗದೆ ಇತ್ತ ಹಣವೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಈಗ ಪೊಲೀಸರ ಮೊರೆ ಹೋಗಿದ್ದಾನೆ.

ವೃತ್ತಿಯಲ್ಲಿ ಬ್ಯಾಂಕರ್ ಆಗಿರುವ ಈ ವ್ಯಕ್ತಿ, ಮೇ 20 ರಂದು ಕಂಪ್ಯೂಟರ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪಾಪ್ ಅಪ್ ಜಾಹೀರಾತು ಬಂದಿದೆ. ಇದರಲ್ಲಿ ಡೇಟಿಂಗ್ ಕುರಿತು ಮಾಹಿತಿಯಿದ್ದು, ಕುತೂಹಲಗೊಂಡ ಆತ ಅದರಲ್ಲಿ ತನ್ನ ಮೊಬೈಲ್ ನಂಬರ್ ಸಮೇತ ಕೆಲ ವಿವರವನ್ನು ಭರ್ತಿ ಮಾಡಿದ್ದಾನೆ.

ಇದಾದ ಕೆಲ ಹೊತ್ತಿನಲ್ಲೇ ಆತನ ಮೊಬೈಲ್ ಗೆ ತಾನಿಯಾ ಎಂಬ ಮಹಿಳೆ ಕರೆ ಮಾಡಿ ಮಾತನಾಡಿದ್ದಾಳೆ. 3.40 ಲಕ್ಷ ರೂ. ಗಳನ್ನು ತಾನೇಳಿದ ಖಾತೆಗೆ ಹಾಕುವಂತೆ ಆಕೆ ತಿಳಿಸಿದ್ದು, ಮೊದಲ ಕಂತಿನಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಪಾವತಿಸಲು ತಿಳಿಸಿದ್ದಾಳೆ.

ಅದರಂತೆ ಈತ ಸುಬೇಂದೂ ಮಂಡಲ್ ಎಂಬಾತನ ಖಾತೆಗೆ ಒಂದು ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾನೆ. ಮೇ 23 ರಂದು ಈ ವ್ಯಕ್ತಿಯಿಂದ ಮತ್ತೆ 1.20 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಲಾಗಿದೆ. ಇದರ ಮಧ್ಯೆ ಮಿನಿ ಎಂಬ ಮತ್ತೊಬ್ಬ ಯುವತಿ ಕರೆ ಮಾಡಿ ತಾನು ಭೇಟಿಯಾಗುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಆಫರ್ ಒಂದು ಇದ್ದು 5.24 ಲಕ್ಷ ರೂಪಾಯಿಗಳನ್ನು ಪಾವತಿಸಿದರೆ ಪೂರ್ಣ ಮೊತ್ತವನ್ನು ವಾಪಸ್ ಮಾಡುವುದಾಗಿ ತಿಳಿಸಲಾಗಿದೆ.

ಹೀಗೆ ವಿವಿಧ ಹಂತದಲ್ಲಿ ಒಟ್ಟು 12.55 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಲಾಗಿದ್ದು, ಇಷ್ಟು ಹಣ ಕಳೆದುಕೊಂಡ ಮೇಲೆ ಈ ವ್ಯಕ್ತಿಗೆ ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ತನ್ನ ಪತ್ನಿಗೆ ನಡೆದ ವಿಷಯವನ್ನೆಲ್ಲವನ್ನು ತಿಳಿಸಿದ್ದು, ಪತ್ನಿಯ ಸಲಹೆಯಂತೆ ಈಗ ಪೊಲೀಸರಿಗೆ ದೂರು ನೀಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...