alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ಟಡ ಕುಸಿತದಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ 40 ಪುಟ್ಟ ಮಕ್ಕಳು

ಎರಡು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಸಂಭವಿಸಿದ ಭೀಕರ ಕಟ್ಟಡ ಕುಸಿತದಲ್ಲಿ 40 ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕುಸಿದಿರುವ ಹುಸೈನಿ ಮಂಜಿಲ್ ಕಟ್ಟಡದಲ್ಲಿ ಪ್ಲೇ ಹೋಮ್ ನಡೆಸಲಾಗ್ತಿತ್ತು. ಅಲ್ಲಿ ಒಟ್ಟು 40 ಮಕ್ಕಳು ಇರ್ತಾ ಇದ್ರು.

ಆದ್ರೆ ಪ್ಲೇ ಸ್ಕೂಲ್ ಆರಂಭವಾಗಲು ಅರ್ಧ ಗಂಟೆ ಇರುವಾಗ್ಲೇ ಕಟ್ಟಡ ಕುಸಿದಿದ್ದರಿಂದ, ಕಂದಮ್ಮಗಳು ಬಚಾವ್ ಆಗಿವೆ. ಕಳೆದ 11 ವರ್ಷಗಳಿಂದ್ಲೂ ಕಟ್ಟಡದ ನೆಲಮಹಡಿಯಲ್ಲಿ ‘ತುಲಿಪ್ ಪ್ಲೇ ಗ್ರೂಪ್ & ನರ್ಸರಿ’ ನಡೆಸಲಾಗ್ತಿದೆ. ಇಲ್ಲಿನ ನಿವಾಸಿಗಳೆಲ್ಲ ಮಕ್ಕಳನ್ನು ಪ್ರಿಸ್ಕೂಲ್ ಗಾಗಿ ಇಲ್ಲೇ ಕಳಿಸ್ತಾರೆ.

ಬೆಳಗ್ಗೆ 9.30 ಗಂಟೆಗೆ ಪ್ರಿಸ್ಕೂಲ್ ಆರಂಭವಾಗುತ್ತದೆ. ಅದಕ್ಕೂ ಅರ್ಧಗಂಟೆ ಮೊದಲು ಅಂದ್ರೆ 8.30ಕ್ಕೆ ಕಟ್ಟಡ ವಾಲಿತ್ತು. ನಂತರ ಹಾಗೇ ಧರಾಶಾಹಿಯಾಗಿದೆ. ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿದ್ದ 13 ಜನರನ್ನು ರಕ್ಷಿಸಲಾಗಿದೆ. ಮುಂಬೈನಲ್ಲಿ 48 ಗಂಟೆಗಳ ಕಾಲ ಭಾರೀ ಮಳೆ ಸುರಿದಿತ್ತು. ನಂತರ 117 ವರ್ಷಗಳ ಹಳೆಯದಾದ ಈ ಕಟ್ಟಡ ನೆಲಕ್ಕುರುಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...