alex Certify
ಕನ್ನಡ ದುನಿಯಾ       Mobile App
       

Kannada Duniya

ಸುಖ ನಿದ್ರೆಯಲ್ಲಿದ್ದವರಿಗೆ ಯಮಸ್ವರೂಪಿಯಾಗಿ ಬಂದ ಲಾರಿ

accident_64689ತಮ್ಮ ಗುಡಿಸಲಿನಲ್ಲಿ ಬೆಳಗಿನ ಸುಖ ನಿದ್ರೆಯಲ್ಲಿದ್ದ ಆ ನಾಲ್ವರಿಗೆ ಲಾರಿಯೊಂದು ಯಮಸ್ವರೂಪಿಯಾಗಿ ಬಂದಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯಲ್ಲಿದ್ದ ಗುಡಿಸಲಿಗೆ ನುಗ್ಗಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ತಿರುವಲ್ಲೂರು ಸಮೀಪದ ಪುದುಚತ್ತೀರಮ್ ಬಳಿ ಈ ಅಪಘಾತ ಸಂಭವಿಸಿದ್ದು, ತಿರುವಲ್ಲೂರ್ ನಿಂದ ಚೆನ್ನೈಗೆ ಹೋಗುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಗುಡಿಸಲಿಗೆ ನುಗ್ಗಿದೆ.

ಇದರಿಂದಾಗಿ ಗುಡಿಸಲಿನಲ್ಲಿ ಮಲಗಿದ್ದ 50 ವರ್ಷದ ವ್ಯಕ್ತಿ, ಆತನ ಮಗ 18 ವರ್ಷದ ಯುವಕ, 25 ವರ್ಷದ ಸಂಬಂಧಿ ಹಾಗೂ 2 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...