alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನ ಪ್ರಾಣ ತೆಗೆದಿದೆ ಪೇಯ್ನ್ ಕಿಲ್ಲರ್ ಇಂಜೆಕ್ಷನ್

ದೆಹಲಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ 4 ತಿಂಗಳ ಮಗು ಮೃತಪಟ್ಟಿದೆ. ಮಗುವಿನ ಮೇಲ್ತುಟಿಗೆ ಹೊಲಿಗೆ ಹಾಕಲಾಗಿತ್ತು. ತಾತ್ಕಾಲಿಕ ನೋವು ಶಮನಕ್ಕಾಗಿ ವೈದ್ಯರು ಪೇಯ್ನ್ ಕಿಲ್ಲರ್ ಇಂಜೆಕ್ಷನ್ ಕೊಟ್ಟಿದ್ದರು. ಅದಾಗಿ ಸ್ವಲ್ಪ ಹೊತ್ತಿನ ಬಳಿಕ ಮಗು ಸಾವನ್ನಪ್ಪಿದೆ.

ಜನವರಿ 17ರಂದು ಮಗುವನ್ನು ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಗೆ ಕರೆತರಲಾಗಿತ್ತು. ತುಟಿಗೆ ಹೊಲಿಗೆ ಹಾಕುವುದಾಗಿ ವೈದ್ಯರು ತಿಳಿಸಿದ್ದಾರೆ. ಅದಕ್ಕೆ ಮಗುವಿನ ಪೋಷಕರು ಕೂಡ ಒಪ್ಪಿಕೊಂಡಿದ್ದರು.

ಸರ್ಜರಿ ಬಳಿಕ ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಾಯ್ತು. ಆದ್ರೆ ಮಗು ಒಂದೇ ಸಮನೆ ಅಳುತ್ತಿತ್ತು. ಹಾಗಾಗಿ ಮತ್ತೆ ಮಗುವನ್ನು ಕರೆದೊಯ್ಯಲಾಗಿದ್ದು, ವೈದ್ಯರು ಪೇಯ್ನ್ ಕಿಲ್ಲರ್ ಇಂಜೆಕ್ಷನ್ ನೀಡಿದ್ದಾರೆ. ಅದಾದ್ಮೇಲೆ ಮಗು ಸೈಲೆಂಟ್ ಆಗಿಬಿಟ್ಟಿತ್ತು. ನಂತರ ಚಲನೆಯೇ ಇರಲಿಲ್ಲ.

ಕೂಡಲೇ ಮಗುವನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಲಾಯ್ತು. ಒಂದು ಗಂಟೆ ಬಳಿಕ ಮೆಡಿಸಿನ್ ರಿಯಾಕ್ಷನ್ ನಿಂದ ಮಗು ಮೃತಪಟ್ಟಿರೋದಾಗಿ ಆಸ್ಪತ್ರೆ ಸಿಬ್ಬಂದಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಹಾಗೂ ಆಸ್ಪತ್ರೆ ವಿರುದ್ಧ ಮಗುವನ್ನು ಕಳೆದುಕೊಂಡಿರುವ ಪೋಷಕರು ದೂರು ದಾಖಲಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...