alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಆರ್.ಎಸ್.ಎಸ್. ಕಚೇರಿಯಲ್ಲಿ ಬಾಂಬ್ ಸ್ಪೋಟ

kerala

ಕೋಜಿಕ್ಕೋಡ್: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದರೆ, 1 ಕೋಟಿ ರೂ ನೀಡುವುದಾಗಿ ಹೇಳಿದ ಕೆಲವೇ ಗಂಟೆಗಳಲ್ಲಿ ಆರ್.ಎಸ್.ಎಸ್. ಕಚೇರಿಯಲ್ಲಿ ಬಾಂಬ್ ಸ್ಪೋಟಗೊಂಡಿದೆ.

ಕೇರಳದ ನಾದಪುರಂ ಸಮೀಪದ ಕಲ್ಲಾಚಿಯ ಆರ್.ಎಸ್.ಎಸ್. ಕಚೇರಿಯಲ್ಲಿ ಬಾಂಬ್ ಸ್ಪೋಟಗೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದ ಆರ್.ಎಸ್.ಎಸ್. ಸಹ ಪ್ರಚಾರ ಪ್ರಮುಖ ಕುಂದನ್ ಚಂದ್ರಾವತ್ ಉಜ್ಜಯಿನಿಯಲ್ಲಿ ಮಾತನಾಡುತ್ತಾ, ಕೇರಳದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರ ಹತ್ಯೆ ತಡೆಯಲು ವಿಫಲರಾಗಿರುವ ಪಿಣರಾಯಿ ವಿಜಯನ್ ತಲೆ ಕಡಿದರೆ 1 ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದರು.

ಇದಕ್ಕೆ ಪ್ರತಿಯಾಗಿ ಆರ್.ಎಸ್.ಎಸ್. ಕಚೇರಿ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಸುಧೀರ್, ವಿನೇಶ್, ಬಾಬು, ಸುನೀಲ್ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೋಝಿಕ್ಕೊಡ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...