alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಯಂತ್ರದ ಬದಲಿಗೆ ಹೊತ್ತೊಯ್ದಿದ್ದೇನು ಗೊತ್ತಾ ?

4 Dudes Tried To Steal A State Bank ATM, Managed To Steal The Passbook Machine Instead!ದಿಢೀರ್ ಶ್ರೀಮಂತರಾಗಬೇಕೆಂಬ ಆತುರದಲ್ಲಿ ಆ ನಾಲ್ಕು ಮಂದಿ ಚೋರರು ಎಟಿಎಂ ಯಂತ್ರವನ್ನು ಹೊತ್ತುಕೊಂಡು ಹೋಗಲು ಮುಂದಾಗಿದ್ದರು. ಯಂತ್ರವನ್ನು ಹೊತ್ತೊಯ್ಯುವಲ್ಲಿ ಸಫಲರಾದ ಅವರುಗಳು, ಸಿಕ್ಕಿ ಬಿದ್ದ ವೇಳೆ ತಾವು ತಂದಿದ್ದೇನು ಎಂದು ತಿಳಿದ ಬಳಿಕ ಇಂಗು ತಿಂದ ಮಂಗನಂತಾಗಿದ್ದಾರೆ.

ಇಂತದೊಂದು ಘಟನೆ ಗೌಹಾತಿಯಲ್ಲಿ ನಡೆದಿದೆ. ಅಲ್ಲಿನ ಬಿನೋನ್ ನಗರದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಗೆ ನುಗ್ಗಿದ ಸಾಹೇಬ್ ಆಲಿ, ಸೈಫುಲ್ಲಾ ರೆಹಮಾನ್, ಮೈನುಲ್ ಹಕ್ ಹಾಗೂ ಸದ್ದಾಂ ಹುಸೇನ್ ತಾವು ತಂದಿದ್ದ ಚೆವರ್ಲೆಟ್ ವಾಹನದಲ್ಲಿ ಯಂತ್ರವನ್ನು ಇರಿಸಿಕೊಂಡಿದ್ದಾರೆ.

ಇನ್ನೇನು ನಾವುಗಳು ಶ್ರೀಮಂತರಾಗಿಬಿಡುತ್ತೇವೆಂದು ಕನಸು ಕಾಣುತ್ತಿದ್ದ ಅವರಿಗೆ ಎದುರಾಗಿ ರಾತ್ರಿ ಗಸ್ತು ನಿರ್ವಹಿಸುತ್ತಿದ್ದ ಪೊಲೀಸರ ವಾಹನ ಎದುರಾಗಿದೆ. ನಾಲ್ವರನ್ನೂ ಹಿಡಿದ ಪೊಲೀಸರು ಅವರುಗಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದು, ಬ್ಯಾಂಕ್ ಅಧಿಕಾರಿಗಳನ್ನೂ ಬರ ಮಾಡಿಕೊಂಡಿದ್ದಾರೆ. ಅವರುಗಳು ಬಂದು ಪರಿಶೀಲಿಸಿದ ವೇಳೆ ಈ ನಾಲ್ವರು ಚೋರರು ಹೊತ್ತೊಯ್ದಿದ್ದು ಹಣ ತುಂಬಿಸಲಾಗಿದ್ದ ಯಂತ್ರವನ್ನಲ್ಲ ಬದಲಾಗಿ ಗ್ರಾಹಕರ ಪಾಸ್ ಬುಕ್ ನಲ್ಲಿ ಖಾತೆ ವಿವರ ನಮೂದಿಸುವ ಯಂತ್ರ ಎಂಬುದು ಬೆಳಕಿಗೆ ಬಂದಿದೆ. ಇದೀಗ ನಾಲ್ವರು ಖದೀಮರೂ ಕಂಬಿ ಹಿಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...