alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲೇ ಸ್ಕೂಲ್ ಟೇಬಲ್ ಕೆಳಗೆ ಶಿಕ್ಷಕಿಯರು ಮಾಡ್ತಿದ್ದರು ಈ ಕೆಲಸ

ಪ್ಲೇ ಸ್ಕೂಲ್ ಶಿಕ್ಷಕಿಯರು ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3 ಶಿಕ್ಷಕಿಯರನ್ನು ವಶಕ್ಕೆ ಪಡೆದಿದ್ದಾರೆ. ಶಿಕ್ಷಕಿಯರ ವಿರುದ್ಧ ಯಾವುದೇ ಸಾಕ್ಷ್ಯಿ ಸಿಕ್ಕಿಲ್ಲ.

ಇಂಧೋರ್ ನ ಯುರೋ ಕಿಡ್ ಇಂಟರ್ನ್ಯಾಷನಲ್ ಪ್ಲೇ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. ಎಲ್ ಕೆಜಿ ಓದುತ್ತಿದ್ದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಸಮೀಕ್ಷಾ, ಯಾಮಿನಿ ಹಾಗೂ ರಶ್ಮಿ ಮಗು ಜೊತೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮೂರು ತಿಂಗಳ ಹಿಂದೆ ಮಗು ಪ್ಲೇ ಸ್ಕೂಲಿಗೆ ಸೇರಿತ್ತು. ಆಗಿನಿಂದಲೂ ಖಾಸಗಿ ಅಂಗ ನೋವು ಎನ್ನುತ್ತಿದ್ದಳು. ಗುರುವಾರ ಆಕೆ ಶಿಕ್ಷಕಿಯರು ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆಂದು ಹೇಳಿದ್ದಾಳೆ. ವಾಟ್ಸ್ ಅಪ್ ನಲ್ಲಿ ಶಿಕ್ಷಕಿಯರನ್ನು ಗುರುತಿಸಿದ್ದಾಳೆ. ನಂತ್ರ ಸ್ಕೂಲಿಗೆ ಕರೆದುಕೊಂಡು ಹೋದಾಗ ಟೇಬಲ್ ಕೆಳಗೆ ಇಬ್ಬರು ಶಿಕ್ಷಕಿಯರು ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಇನ್ನೊಬ್ಬ ಶಿಕ್ಷಕಿ ವಿಡಿಯೋ ಮಾಡುತ್ತಾಳೆಂದು ಬಾಲಕಿ ಹೇಳಿದ್ದಾಳೆ. ಇದ್ರಿಂದ ಕೋಪಗೊಂಡ ತಾಯಿ ಶಿಕ್ಷಕಿಯರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾಳೆ.

ಪ್ರಕರಣ ದಾಖಲಾಗಿದ್ದು, ಪೊಲೀಸರು ಶಿಕ್ಷಕಿಯರನ್ನು ಬಂಧಿಸಿದ್ದಾರೆ. ಆದ್ರೆ ಬಾಲಕಿಯನ್ನು ವಿಚಾರಣೆ ನಡೆಸಿಲ್ಲವೆಂದು ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...