alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಕಳೆದ 12 ವರ್ಷಗಳಲ್ಲಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ

ದೇಶದಲ್ಲಿ ಪ್ರತಿನಿತ್ಯ ಅನೇಕರು ಅಂತಿಮ ಉಸಿರೆಳೆಯುತ್ತಾರೆ. ಆದರೆ ಇದರಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆಯನ್ನೊಮ್ಮೆ ಕೇಳಿದರೆ ಶಾಕ್ ಆಗುವುದರಲ್ಲಿ ಅನುಮಾನವಿಲ್ಲ.

ಹೌದು, ಅಮೃತಸರ ರೈಲ್ವೆ ದುರಂತದ ಬಳಿಕ ಕಳೆದ 12 ವರ್ಷದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟವರ ಸಂಖ್ಯೆಯನ್ನೊಮ್ಮೆ ನೋಡಿದರೆ, ನಿಜಕ್ಕೂ ಗಾಬರಿಯಾಗುವುದರಲ್ಲಿ ಅನುಮಾನವಿಲ್ಲ. ಕಳೆದ 12 ವರ್ಷದಲ್ಲಿ ಅಪಘಾತದಲ್ಲಿ ಒಟ್ಟು 39 ಲಕ್ಷ ಮಂದಿ ಕೊನೆಯುಸಿರೆಳೆದಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ ಬಹಿರಂಗಗೊಳಿಸಿದೆ.

ಸಹಜ ಸಾವು ಹಾಗೂ ಅರೋಗ್ಯ ಸಮಸ್ಯೆಯಿಂದ ಹೊರತುಪಟ್ಟು, ಇನ್ನುಳಿದ ರೀತಿಯಲ್ಲಿ ಸಾವನ್ನಪ್ಪಿರುವುದನ್ನು ಅಸಹಜ ಸಾವೆಂದು ಪರಿಗಣಿಸಲಾಗುವುದು. ಪ್ರಮುಖವಾಗಿ ರಸ್ತೆ ಅಪಘಾತ, ನೀರಿನಲ್ಲಿ ಮುಳುಗಿ, ರೈಲ್ವೇ ಅಪಘಾತ, ಬೆಂಕಿ ಅವಘಡ ಹಾಗೂ ಜಾರಿ ಬಿದ್ದ ಪ್ರಕರಣಗಳ ಅಂಕಿಅಂಶವನ್ನು ಬಿಡುಗಡೆಗೊಳಿಸಲಾಗಿದೆ. ಈ ಪೈಕಿ ರಸ್ತೆ ಅಪಘಾತದಲ್ಲಿ ಕಳೆದ 12 ವರ್ಷಗಳಲ್ಲಿ ಸುಮಾರು 14.5 ಲಕ್ಷ ಜನ ಮೃತಪಟ್ಟಿದ್ದರೆ, ಎರಡನೇ ಸ್ಥಾನದಲ್ಲಿ 3.2 ಲಕ್ಷ ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ರೈಲ್ವೇ ಅಪಘಾತದಲ್ಲಿ 2.9 ಲಕ್ಷ, ಬೆಂಕಿ ಅವಘಡದಲ್ಲಿ 2.5 ಲಕ್ಷ ಹಾಗೂ ಜಾರಿ ಬಿದ್ದು 1.4 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಬಹಿರಂಗಗೊಳಿಸಲಾಗಿದೆ.

2015ರ ದಾಖಲೆಯ ಪ್ರಕಾರ 1.5 ಲಕ್ಷ ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, 2004ರಲ್ಲಿ ಹೋಲಿಸಿದರೆ ಶೇ.64ರಷ್ಟು ಸಾವು ಹೆಚ್ಚಾಗಿದೆಯಂತೆ. ಈ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಅವೈಜ್ಞಾನಿಕ ರಸ್ತೆ ನಿರ್ಮಾಣ, ನಿಯಮ ಪಾಲನೆ ಜಾರಿಗೆ ತರುವಲ್ಲಿ ಹಾಗೂ ಅಪಘಾತದ ಬಗ್ಗೆ ಜನರಲ್ಲಿ ಸೂಕ್ತ ಜಾಗೃತಿ ಇಲ್ಲವಾದ್ದರಿಂದ ಅಪಘಾತದ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...