alex Certify
ಕನ್ನಡ ದುನಿಯಾ       Mobile App
       

Kannada Duniya

NRI ಗಳಿಗೆ ಹರಿಯಾಣ ಸರ್ಕಾರದಿಂದ ಭಾರೀ ವೆಚ್ಚ

manohar-lal-khattarಈ ವರ್ಷದ ಜನವರಿಯಲ್ಲಿ ಹರಿಯಾಣದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ, ಗುರ್ಗಾಂವ್ ನಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಪ್ರವಾಸಿ ಹರಿಯಾಣ ದಿವಸ್’ ವೇಳೆ ಆಗಮಿಸಿದ್ದ ಅನಿವಾಸಿ ಭಾರತೀಯರ ಊಟೋಪಚಾರ ಹಾಗೂ ವಾಸ್ತವ್ಯಕ್ಕೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬಹಿರಂಗವಾಗಿದೆ.

ಗುರ್ಗಾಂವ್ ಮೂಲದ ಹರೀಂದರ್ ಧಿಂಗ್ರಾ ಎಂಬವರು ವೆಚ್ಚದ ಮಾಹಿತಿ ಕೋರಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಆಗಮಿಸಿದ್ದ ಅತಿಥಿಗಳ ವಾಸ್ತವ್ಯಕ್ಕೆ ತಾಜ್ ವಿವಾಂಟ, ಕ್ರೌನ್ ಪ್ಲಾಜಾ ಟುಡೇ, ಹಯಾತ್ ಪ್ಯಾಲೇಸ್ ಮೊದಲಾದ ಪಂಚತಾರಾ ಹೋಟೆಲ್ ಗಳಲ್ಲಿ 384 ರೂಂ ಬುಕ್ ಮಾಡಲಾಗಿದ್ದು, ಇದಕ್ಕಾಗಿ 62 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆಯಿಂದ 150 ಅತಿಥಿಗಳಿಗೆ ‘ಹರಿಯಾಣ ದರ್ಶನ್’ ಹಮ್ಮಿಕೊಂಡಿದ್ದು, ತಲಾ 12,500 ರೂ. ಗಳಂತೆ ಒಟ್ಟು 19 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಅಲ್ಲದೇ ಸುಮಾರು 100 ಮಂದಿ ಗಣ್ಯರಿಗೆ ವಿದೇಶದಿಂದ ಬಂದು, ಹೋಗಲು ಸರ್ಕಾರದ ವತಿಯಿಂದಲೇ ಏರ್ ಟಿಕೇಟ್ ಬುಕ್ ಮಾಡಿಸಲಾಗಿದ್ದು, ಇದರ ಮಾಹಿತಿಯನ್ನು ಒದಗಿಸಲಾಗಿಲ್ಲ. ಆದರೆ ಲಭ್ಯ ಮಾಹಿತಿಗಳ ಪ್ರಕಾರ ಇದಕ್ಕಾಗಿ 60 ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗಿದೆ ಎನ್ನಲಾಗಿದೆ.

‘ಪ್ರವಾಸಿ ಹರಿಯಾಣ ದಿವಸ್’ ಸಂದರ್ಭದಲ್ಲಿ 24 ಕಂಪನಿಗಳು ರಾಜ್ಯದಲ್ಲಿ 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿಕೆ ನೀಡಿದ್ದರೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಒಂದೇ ಒಂದು ರೂಪಾಯಿಯೂ ರಾಜ್ಯದಲ್ಲಿ ಹೂಡಿಕೆಯಾಗಿಲ್ಲ. ಇದೊಂದು ಗಿಮಿಕ್ ಎಂದು ಆರೋಪಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...