alex Certify
ಕನ್ನಡ ದುನಿಯಾ       Mobile App
       

Kannada Duniya

ಆಧುನಿಕ ಶ್ರವಣಕುಮಾರನಿಗೆ ಹ್ಯಾಟ್ಸಾಫ್

Shravan Kumar

ಆಗ್ರಾ: ತಂದೆ, ತಾಯಿಯನ್ನು ಹೊತ್ತು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಶ್ರವಣಕುಮಾರನ ಕತೆಯನ್ನು ಕೇಳಿರುತ್ತೀರಿ. ಆಧುನಿಕ ಶ್ರವಣಕುಮಾರನ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಈ ಶ್ರವಣಕುಮಾರನ ಹೆಸರು ಕೈಲಾಶ್ ಗಿರಿ.

ಪವಿತ್ರ ಚಾರ್ ಧಾಮ್ ನೋಡಬೇಕೆಂಬ ತಾಯಿಯ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಕೈಲಾಶ್ ಗಿರಿ ಸುಮಾರು 20 ವರ್ಷಗಳಿಂದ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಬರೋಬ್ಬರಿ 37 ಸಾವಿರ ಕಿಲೋಮೀಟರ್ ಯಾತ್ರೆ ನಡೆಸಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದ ಕಾರ್ತಿದೇವಿ ಅವರಿಗೆ, ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಬೇಕೆಂಬ ಹಂಬಲ ಇತ್ತು. ಅಂತಹ ಪವಿತ್ರ ಕ್ಷೇತ್ರಕ್ಕೆ ಹೋಗಬೇಕೆಂದು ಮಗನ ಬಳಿ ಹೇಳಿಕೊಂಡಿದ್ದರು.

ಅಮ್ಮನ ಆಸೆಯಂತೆ ಚಾರ್ ಧಾಮ್ ದರ್ಶನಕ್ಕೆ ಕರೆದುಕೊಂಡು ಹೊರಟ ಕೈಲಾಶ್ ಗಿರಿ, ಅವರನ್ನು ಹೆಗಲ ಮೇಲೆ ಹೊತ್ತುಕೊಂಡೇ ಸಾಗಿದ್ದಾರೆ. 1996ರಿಂದ ಅವರು ತಾಯಿಯನ್ನು ಹೊತ್ತುಕೊಂಡೇ ದರ್ಶನಕ್ಕೆ ಹೋಗುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಪ್ರಯಾಣ ಕೈಗೊಳ್ಳುವ ಅವರು, ಬುಟ್ಟಿಯಲ್ಲಿ 90 ವರ್ಷದ ತಾಯಿಯನ್ನು ಕೂರಿಸಿಕೊಂಡು ಹೋಗುತ್ತಾರೆ. ಅಮ್ಮನ ಯಾತ್ರೆಯ ಕನಸನ್ನು ಈಡೇರಿಸುವುದು ನನ್ನ ಕರ್ತವ್ಯ ಎಂದು ಹೇಳುತ್ತಾರೆ. ದೇಶದ ವಿವಿಧ ಪವಿತ್ರ ಕ್ಷೇತ್ರಗಳಿಗೆ ಹೋಗುವ ಆಶಯ ಅವರದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...