alex Certify
ಕನ್ನಡ ದುನಿಯಾ       Mobile App
       

Kannada Duniya

ಮೀರತ್, ಗಾಜಿಯಾಬಾದ್ ನಲ್ಲಿ 37 ಖೈದಿಗಳಿಗೆ HIV ಸೋಂಕು

ಮೀರತ್ ಹಾಗೂ ಗಾಜಿಯಾಬಾದ್ ಜೈಲಿನಲ್ಲಿರುವ ಸುಮಾರು 37 ಖೈದಿಗಳಲ್ಲಿ ಎಚ್ ಐ ವಿ ಸೋಂಕು ಪತ್ತೆಯಾಗಿದೆ. ಓರ್ವ ಮಹಿಳಾ ಖೈದಿಗೆ ಸಹ ಎಚ್ ಐ ವಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಳೆದ ವಾರವಷ್ಟೆ ಗೋರಖ್ಪುರ ಜಿಲ್ಲಾ ಕಾರಾಗೃಹದಲ್ಲೂ 23 ಖೈದಿಗಳು ಎಚ್ ಐ ವಿಯಿಂದ ಬಳಲುತ್ತಿರುವುದು ದೃಢಪಟ್ಟಿತ್ತು. ದಾಸ್ನಾ ಜೈಲಿನಲ್ಲಿ ಏರ್ಪಡಿಸಿದ್ದ ಆರೋಗ್ಯ ಪರೀಕ್ಷಾ ಶಿಬಿರದಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಅತ್ತ ಚೌಧರಿ ಚರಣ್ ಸಿಂಗ್ ಜೈಲಿನಲ್ಲಿ 10 ಖೈದಿಗಳು ಎಚ್ ಐ ವಿ ಪೀಡಿತರಾಗಿದ್ದಾರೆ. ಎಚ್ ಐ ವಿ ಯಿಂದ ಬಳಲುತ್ತಿರುವವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಜೊತೆಗೆ ಉಚಿತವಾಗಿ ಔಷಧ ನೀಡಲಾಗುವುದು ಅಂತಾ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕಿತ್ಸೆ ಹಿನ್ನೆಲೆಯಲ್ಲಿ ಎಚ್ ಐ ವಿ ಸೋಂಕಿತ ಖೈದಿಗಳನ್ನು ಪ್ರತ್ಯೇಕ ಸೆಲ್ ಗೆ ವರ್ಗಾಯಿಸಲಾಗಿದೆ. ಖೈದಿಗಳಿಗೆ ಎಚ್ ಐ ವಿ ಇದೆ ಅನ್ನೋ ಸುದ್ದಿ ಕೇಳಿ ಜೈಲಿನಲ್ಲಿದ್ದವರೆಲ್ಲ ಆತಂಕಗೊಂಡಿದ್ದಾರೆ. ಇವರಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಬಗ್ಗೆ ತನಿಖೆ ಮಾಡುವಂತೆ ಸೂಚಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...