alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶೇಷ ಸುದ್ದಿ: ಛತ್ತೀಸ್ಗಢದಲ್ಲಿದ್ದಾರೆ 3630 ಮಂದಿ ಶತಾಯುಷಿ ಮತದಾರರು

2018 ರ ಅಂತ್ಯದಲ್ಲಿ ಛತ್ತೀಸ್ಗಢದ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ಅಧಿಸೂಚನೆ ಹೊರಬೀಳೋಕೆ ಇನ್ನೂ ಸಾಕಷ್ಟು ಸಮಯ ಇದೆ. ಆದ್ರೆ ಛತ್ತೀಸ್ಗಢದ ಮತದಾರರ ವಿಶೇಷತೆಯ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಸುಬ್ರತ್ ಸಾಹೊ ಮಾಹಿತಿಯೊಂದನ್ನ ನೀಡಿದ್ದಾರೆ. ಛತ್ತೀಸ್ಗಡ್ನಲ್ಲಿ ಈ ಬಾರಿ ಮತದಾನ ಮಾಡಲಿರೋ ಶತಾಯುಷಿಗಳ ಸಂಖ್ಯೆ ಎಷ್ಟು ಗೊತ್ತಾ ಬರೋಬ್ಬರಿ 3630 ಮಂದಿ.

ಹೌದು, ಈ ಬಾರಿ ನೂರು ವರ್ಷ  ದಾಟಿದ 3630 ಮಂದಿ ಮತದಾನ ಮಾಡಲಿದ್ದಾರೆ. ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡೋದಕ್ಕೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು ಈ ವಿಚಾರವನ್ನ ತಿಳಿಸಿದ್ದಾರೆ. ಸೆಪ್ಟೆಂಬರ್ 27 ಕ್ಕೆ ಮತದಾರರ ಅಂತಿಮಪಟ್ಟಿ ಪ್ರಕಟಗೊಳ್ಳಲಿದೆಯಂತೆ.

ಜುಲೈ 31 ರಿಂದ ಆಗಸ್ಟ್ 21 ರವರೆಗೆ ಎರಡನೇ ಹಂತದಲ್ಲಿ ಮತದಾರರ ಪರಿಷ್ಕರಣೆ ನಡೆಯಲಿದ್ದು, ಸೆಪ್ಟೆಂಬರ್ 20 ಕ್ಕೆ ಮತದಾರರ ಪರಿಷ್ಕರಣೆ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಈ ಬಾರಿ ಮೂರನೇ ತಲೆಮಾರಿನ ಎಮ್- 3 ಸರಣಿಯ ಇವಿಎಂ ಯಂತ್ರಗಳ ಜೊತೆ ವಿವಿ ಪ್ಯಾಟ್ ಕೂಡ ಚುನಾವಣೆಗೆ ಬಳಕೆ ಮಾಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...