alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು : 36 ಮಂದಿಗೆ ಗಾಯ

jalli_8fizkwj

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಆಟ ಶುರುವಾಗಿದೆ. ಕಾನೂನು ಹೋರಾಟದ ಮಧ್ಯೆಯೇ ಮಧುರೈನ ಅವನಿಪುರಂನಲ್ಲಿ ಜಲ್ಲಿಕಟ್ಟು ಆಟ ಆಯೋಜಿಸಲಾಗಿತ್ತು. ಆಟದಲ್ಲಿ 36 ಮಂದಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಜಲ್ಲಿಕಟ್ಟಿನಲ್ಲಿ 950 ಎತ್ತುಗಳನ್ನು ಬಳಸಲಾಗಿತ್ತು. 1200ಕ್ಕೂ ಹೆಚ್ಚು ಆಟಗಾರರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಶಕ್ತಿ ಪ್ರದರ್ಶನ ಮಾಡಿದ್ರು. ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರು ಹಾಗೂ ಮೆಡಿಕಲ್ ಟೀಂ ಕೂಡ ಸ್ಥಳದಲ್ಲಿತ್ತು. ಮಧುರೈನ 15 ಮೆಡಿಕಲ್ ಟೀಂ ಹಾಗೂ 20 ಆ್ಯಂಬುಲೆನ್ಸ್ ಸಿದ್ಧವಾಗಿ ನಿಂತಿತ್ತು. ಆಟದಲ್ಲಿ 36 ಮಂದಿ ಗಾಯಗೊಂಡಿದ್ದಾರೆ. 9 ಜನರು ಗಂಭೀರವಾಗಿ ಗಾಯಗೊಂಡಿದ್ದು,ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...