alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಯುವಕನ ಮದುವೆ ಮೆರವಣಿಗೆಗೆ ಕಾವಲಾದ್ರು 350 ಪೊಲೀಸರು

ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯ ನಿಜಾಮ್ಪುರದಲ್ಲಿ ನಡೆದ ದಲಿತ ಯುವಕನ ಮದುವೆ ಮೆರವಣಿಗೆಯೊಂದು ಈಗ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಸುಮಾರು 350 ಪೊಲೀಸ್ ಸಿಬ್ಬಂದಿ ಈ ಮದುವೆ ಮೆರವಣಿಗೆಗೆ ಭದ್ರತೆ ಒದಗಿಸಿದ ವಿಚಾರ ಈಗ ಎಲ್ಲೆಲ್ಲೂ ಚರ್ಚೆಯಾಗ್ತಿದೆ.

ಇತ್ತೀಚೆಗಷ್ಟೆ ಸಂಜಯ್ ಜಾಠವ್ ಎಂಬ ಯುವಕ ಶೀತಲ್ ಸಿಂಗ್ ಎಂಬ ಯುವತಿಯನ್ನ ಮದುವೆಯಾದ. ಮದುವೆಯ ಸಂದರ್ಭದಲ್ಲಿ ತನ್ನ ಊರಿನ ಠಾಕೂರ್ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗುವ ಸಂಬಂಧ ಆತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈ ದೂರನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಯುವಕನ ಮದುವೆಗೆ ಭಾರೀ ಭದ್ರತೆ ಕಲ್ಪಿಸಿದ್ದರು.

ನಾವು ಯಾವುದೇ ಸಮುದಾಯದ ವಿರೋಧಗಳೆಲ್ಲಾ. ನನಗಾಗ್ಲಿ ಅಥವಾ ನನ್ನ ಸಮುದಾಯಕ್ಕಾಗಿ ಠಾಕೂರ್ ಸಮುದಾಯದ ಬಗ್ಗೆ ದ್ವೇಷವಿಲ್ಲ. ಆದ್ರೆ ಇಲ್ಲಸಲ್ಲದ ಕಂದಾಚಾರಗಳ ಬಗ್ಗೆ ನಮ್ಮ ವಿರೋಧವಿದೆ. ಆ ಕಂದಾಚಾರಗಳನ್ನೆಲ್ಲಾ ಮೀರಿ ಗೌರವ ಪಡೆದುಕೊಳ್ಳೋದೇ ನಮ್ಮ ಗುರಿಯಾಗಿತ್ತು. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಅಂತಾರೆ ನವ ವಧು ವರರು.

ಪ್ರಸಕ್ತ ವರ್ಷದಲ್ಲಿ ಕಸ್ಗಂಜ್ ಜಿಲ್ಲೆಯಲ್ಲಿ ನಡೆದ ದಲಿತ ಸಮುದಾಯದ ಮೂರು ಮದುವೆ ಮೆರವಣಿಗೆಗಳ ಮೇಲೆ ಠಾಕೂರ್ ಸಮುದಾಯ ಹಲ್ಲೆ ನಡೆಸಿದ ಆರೋಪವಿದೆ.ಈ ಹಿನ್ನಲೆ ಯಲ್ಲೇ ಯುವಕ ತನ್ನ ಮದುವೆಗೆ ಭದ್ರತೆ ಕೋರಿ ಪೊಲೀಸ್ ಇಲಾಖೆಯ ರಕ್ಷಣೆ ಕೋರಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...