alex Certify
ಕನ್ನಡ ದುನಿಯಾ       Mobile App
       

Kannada Duniya

ನಕ್ಸಲರ ಸಭೆಗೆ ಗೈರಾದ ಗ್ರಾಮಸ್ಥರಿಗೆ ಇಂತಹ ಶಿಕ್ಷೆ

ದಾಂತೇವಾಡ: ಛತ್ತೀಸ್‌ಗಡದಲ್ಲಿ ಮಾವೋವಾದಿಗಳ ಉಪಟಳಕ್ಕೆ ಗ್ರಾಮಸ್ಥರು 2 ರಾತ್ರಿ ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಹತ್ಯೆಗೂ ಸಂಚು ರೂಪಿಸಿರುವ ಸಂಬಂಧ ವರದಿಯಾಗಿತ್ತು. ಇದೀಗ ಮಾವೋವಾದಿಗಳು ಕರೆದಿದ್ದ ಗ್ರಾಮ ಸಭೆಗೆ ಗೈರಾದವರನ್ನು 2 ರಾತ್ರಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಸುಮಾರು 35 ಮಂದಿಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದಿರುವುದು ಬೆಳಕಿಗೆ ಬಂದಿದೆ.

ಮಾವೋವಾದಿಗಳ ಈ ಕೃತ್ಯದಿಂದ 15-16 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, ಆರೇಳು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಲ್ಲದೆ ಇನ್ನೂ ಅನೇಕ ಮಂದಿ ಗ್ರಾಮಸ್ಥರು ಗಾಯಗೊಂಡಿದ್ದರೂ, ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ಅಂದಾಜು 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಛತ್ತೀಸಗಡದ ಸುತ್ತಮುತ್ತ ಅಭಿವೃದ್ಧಿ ಕೆಲಸಗಳು ಸರಾಗವಾಗಿದೆ. ಅವರ ಅನುಮತಿ ಪಡೆಯದೇ ಅನೇಕ ಕೆಲಸಗಳು ನಡೆಯುತ್ತಿದ್ದು, ಪೊಲೀಸ್‌ ಹಾಗೂ ಭದ್ರತಾ ಪಡೆಗಳೂ ಗಣನೀಯ ಸಂಖ್ಯೆಯಲ್ಲಿ ವಿವಿಧ ಪ್ರದೇಶಗಳನ್ನು ಸುತ್ತುವರೆಯುತ್ತಿದ್ದಾರೆ. ಈ ಕಾರಣಕ್ಕಾಗಿ ಗ್ರಾಮಸ್ಥರಿಗೆ ನಕ್ಸಲರು ಎಚ್ಚರಿಕೆ ನೀಡುವ ಉದ್ಧೇಶದಿಂದ ಸಭೆ ಕರೆದಿದ್ದರು. ಸಭೆಯಲ್ಲಿ ಯಾವುದೇ ಕೆಲಸ ಮಾಡಲು ನಕ್ಸಲರ ಅನುಮತಿ ಪಡೆಯಬೇಕು ಎಂದು ಬೆದರಿಸಿರುವುದಾಗಿ ಗ್ರಾಮಸ್ಥರಲ್ಲಿ ಓರ್ವ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ಸರಕಾರದೊಂದಿಗೆ ಜನರು ಕೈಜೋಡಿಸಲು ಮುಂದಾಗಿರುವುದರಿಂದ ಮಾವೋವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಮೇಲೆ ಹಲ್ಲೆ ನಡೆಸುವ ಮೂಲಕ ಭಯದ ವಾತಾವರಣ ಸೃಷ್ಟಿಸಲು ಯೋಜನೆ ರೂಪಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...