alex Certify
ಕನ್ನಡ ದುನಿಯಾ       Mobile App
       

Kannada Duniya

33 ಗಂಟೆ ಏರೋಪ್ಲೇನ್ ಮೋಡ್ ನಲ್ಲಿದ್ರು ಮೋದಿ….

modi

ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಇವತ್ತು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲೆಂಡ್ ಭೇಟಿ ಬಳಿಕ ದೆಹಲಿಗೆ ಬಂದಿಳಿದ ಮೋದಿ ಅವರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬರಮಾಡಿಕೊಂಡ್ರು.

ಇದು ಮೋದಿ ಅವರ ಅತ್ಯಂತ ಬ್ಯುಸಿಯಾದ ಹಾಗೂ ವೇಗವಾದ ವಿದೇಶ ಪ್ರವಾಸ. ಒಟ್ಟು 95 ಗಂಟೆಗಳ ಈ ಪ್ರವಾಸದಲ್ಲಿ ಮೋದಿ 33 ಗಂಟೆಗಳನ್ನು ಏರ್ ಇಂಡಿಯಾ ಬೋಯಿಂಗ್ ವಿಮಾನದಲ್ಲೇ ಕಳೆದಿದ್ದಾರೆ. ಒಟ್ಟು 33 ಮೀಟಿಂಗ್ ಗಳಲ್ಲಿ ಭಾಗವಹಿಸಿದ್ದಾರೆ.

ಒಟ್ಟು ನಾಲ್ಕು ರಾತ್ರಿಗಳಲ್ಲಿ ಮೂರು ರಾತ್ರಿಗಳು ವಿಮಾನ ಪ್ರಯಾಣದಲ್ಲೇ ಕಳೆದುಹೋಗಿವೆ. ಪೋರ್ಚುಗಲ್ ಮತ್ತು ನೆದರ್ಲೆಂಡ್ ನಲ್ಲಿ ಪ್ರಧಾನಿ ತಂಗಿರಲಿಲ್ಲ. ಜೂನ್ 24ರ ಬೆಳಗ್ಗೆ ದೆಹಲಿಯಿಂದ ಹೊರಟು 10 ಗಂಟೆಗಳ ಪ್ರಯಾಣದ ಬಳಿಕ ಮೋದಿ ಲಿಸ್ಬನ್ ತಲುಪಿದ್ದರು.

ಅಲ್ಲಿ ಹೋಟೆಲ್ ಗೆ ಚೆಕ್ ಇನ್ ಮಾಡಿಲ್ಲ. ವಿಮಾನ ನಿಲ್ದಾಣದ ವಿವಿಐಪಿ ಲಾಂಜ್ ನಲ್ಲೇ ಪ್ರಮುಖ ನಾಯಕರನ್ನು ಭೇಟಿ ಮಾಡಿ, ನಂತರ ನೇರವಾಗಿ ಪೋರ್ಚುಗಲ್ ವಿದೇಶಾಂಗ ಕಾರ್ಯಾಲಯಕ್ಕೆ ಹೊರಟಿದ್ದರು. ಅಲ್ಲಿ ಸಭೆಗಳನ್ನು ಮುಗಿಸಿ ಸಂಜೆ 6 ಗಂಟೆಗೆ ವಾಷಿಂಗ್ಟನ್ ಡಿಸಿಯತ್ತ ಪ್ರಯಾಣ ಬೆಳೆಸಿದ್ದರು.

8 ಗಂಟೆಗಳ ಪ್ರಯಾಣದ ಬಳಿಕ ವಾಷಿಂಗ್ಟನ್ ಗೆ ತಲುಪಿದ ಮೋದಿ, ಅಮೆರಿಕದಲ್ಲಿ ಒಟ್ಟು 17 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಮರುದಿನ ರಾತ್ರಿ ಅಮೆರಿಕದಲ್ಲಿ ಉಳಿಯದೇ, ನೆದರ್ಲೆಂಡ್ ಗೆ ತೆರಳಿದ್ದರು. ಅಲ್ಲಿ ಭಾರತೀಯ ಸಮುದಾಯದವರನ್ನುದ್ದೇಶಿಸಿ ಭಾಷಣ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಸಂಜೆ 7 ಗಂಟೆಗೆ ನೆದರ್ಲೆಂಡ್ ನಿಂದ ಹೊರಟು ಇವತ್ತು ಬೆಳಗ್ಗೆ 6.20ಕ್ಕೆ ಸರಿಯಾಗಿ ನವದೆಹಲಿಗೆ ಬಂದಿಳಿದಿದ್ದಾರೆ. ಇವತ್ತು ಕೂಡ ಮೋದಿ ಪ್ರವಾಸದ ಆಯಾಸದಿಂದ ವಿರಮಿಸಿಲ್ಲ. ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...