alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನೈ ಏರ್ಪೋರ್ಟ್ ಬ್ರಿಡ್ಜ್ ನಿಂದ ಬಿದ್ದು ಟೆಕ್ಕಿ ಸಾವು

ಆಂಧ್ರಪ್ರದೇಶದ ವಿಜಯವಾಡ ಮೂಲದ 32 ವರ್ಷದ ಟೆಕ್ಕಿಯೊಬ್ಬರು ಚೆನೈ ಏರ್ಪೋರ್ಟ್ ಬ್ರಿಡ್ಜ್ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಬೆಳಿಗ್ಗೆ 6-30 ರ ಸುಮಾರಿಗೆ ನಡೆದಿದೆ.

ಡೊಮೆಸ್ಟಿಕ್ ವಿಮಾನದ ಪ್ರವೇಶ ದ್ವಾರದ ಬಳಿಯಿದ್ದ ಬ್ರಿಡ್ಜ್ ಮೇಲಿನಿಂದ ಆಯತಪ್ಪಿ ಬಿದ್ದ ಚೈತನ್ಯ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕಂಬಿಗಳ ಮೇಲೆ ಕುಳಿತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆಂದು ಹೇಳಲಾಗಿದೆ.

ಗೇಟ್ ನಂ.4 ರಲ್ಲಿ ಈ ಘಟನೆ ನಡೆಯುತ್ತಿದ್ದಂತೆ ವಿಮಾನ ಪ್ರಯಾಣಿಕರು ಒಂದು ಕ್ಷಣ ಆತಂಕಗೊಂಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಚೈತನ್ಯ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆನ್ನಲಾಗಿದ್ದು, ಅವರ ಬಳಿ ಯಾವುದೇ ಟಿಕೇಟ್ ಇರಲಿಲ್ಲವೆನ್ನಲಾಗಿದೆ. ಇ ಟಿಕೇಟ್ ಮಾಡಿಸಿರಬಹುದೆಂದು ಹೇಳಲಾಗಿದ್ದು, ಮೇಲಿನಿಂದ ಬಿದ್ದ ವೇಳೆ ಚೈತನ್ಯ ಅವರ ಆಪಲ್ ಫೋನ್ ನುಜ್ಜುಗುಜ್ಜಾಗಿರುವ ಕಾರಣ ತಕ್ಷಣಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...