alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಸ್ತೂಲ್ ಜೊತೆಗೆ ಆಟವಾಡಲು ಹೋಗಿ ಪ್ರಾಣಬಿಟ್ಟ ಪಬ್ ಮಾಲೀಕ

ದೆಹಲಿಯ ಶಾಲಿಮಾರ್ ಭಾಗ್ ನಲ್ಲಿ ಪಬ್ ಮಾಲೀಕನೊಬ್ಬ ಪಿಸ್ತೂಲ್ ಜೊತೆ ಆಟವಾಡಲು ಹೋಗಿ ಸಾವು ತಂದುಕೊಂಡಿದ್ದಾನೆ. ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾನೆ. 32 ವರ್ಷದ ನಾಸಿರ್ ಖಾನ್ ಮೃತ ವ್ಯಕ್ತಿ.

ಆಕಸ್ಮಿಕವಾಗಿ ಗುಂಡು ಸಿಡಿದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರತ್ಯಕ್ಷದರ್ಶಿಗಳು ಕೂಡ ಅದನ್ನು ಖಚಿತಪಡಿಸಿದ್ದಾರೆ. ಆದ್ರೆ ಕುಟುಂಬಸ್ಥರು ಮಾತ್ರ ನಾಸಿರ್ ಕೊಲೆಯಾಗಿದ್ದಾನೆ ಅಂತಾ ಆರೋಪಿಸಿದ್ದಾರೆ.

ಪಿಸ್ತೂಲ್ ಹಿಡಿದುಕೊಂಡಿದ್ದ ನಾಸಿರ್, ರಿವಾಲ್ವರ್ ನ ಒಂದು ಚೇಂಬರ್ ನಲ್ಲಿ ಬುಲೆಟ್ ಲೋಡ್ ಮಾಡಿದ್ದಾನೆ. ನಂತರ ತನ್ನ ತಲೆಗೆ ಗುರಿ ಇಟ್ಟುಕೊಂಡು ಟ್ರಿಗರ್ ಒತ್ತಿದಂತೆ ನಟಿಸಲು ಮುಂದಾಗಿದ್ದಾನೆ.

ಆದ್ರೆ ಆಕಸ್ಮಿಕವಾಗಿ ಟ್ರಿಗರ್ ಒತ್ತಿಬಿಟ್ಟಿದ್ದರಿಂದ ಗುಂಡು ಸಿಡಿದು ತಲೆಯೊಳಗೆ ಹೊಕ್ಕಿದೆ. ಈ ವೇಳೆ ಆತನ ಸ್ನೇಹಿತರು ಕೂಡ ಪಬ್ ನಲ್ಲಿ ಪಾರ್ಟಿ ಮಾಡುತ್ತಿದ್ರು. ಆದ್ರೆ ನಾಸಿರ್ ಬಳಿ ಪಿಸ್ತೂಲ್ ಲೈಸನ್ಸ್ ಇರಲಿಲ್ಲ. ಹಾಗಾಗಿ ಈ ಗನ್ ಮಾಲೀಕರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...