alex Certify
ಕನ್ನಡ ದುನಿಯಾ       Mobile App
       

Kannada Duniya

ರೇಪ್ ಕೇಸ್ ದಾಖಲಾದ 31 ವರ್ಷಗಳ ಬಳಿಕ ಖುಲಾಸೆ

 

ಮುಂಬೈನಲ್ಲಿ 62 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ 31 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರ ಕೇಸ್ ದಾಖಲಾಗಿತ್ತು. ಈಗ ಆತ ಕೇಸ್ ನಿಂದ ಖುಲಾಸೆಗೊಂಡಿದ್ದಾನೆ. ಚೆಂಬೂರ್ ನಿವಾಸಿ ಅಬ್ದುಲ್ ಶೇಖ್ ನನ್ನು ಸೆಶನ್ಸ್ ಕೋರ್ಟ್ ಆರೋಪ ಮುಕ್ತಗೊಳಿಸಿದೆ.

ಇದು ಅತ್ಯಂತ ದೀರ್ಘಾವಧಿಯಿಂದ ಬಾಕಿ ಇದ್ದ ಪ್ರಕರಣ. ಈ ಪ್ರಕರಣ ಸಂತ್ರಸ್ಥೆ ಮತ್ತವಳ ಪತಿ ಇಬ್ಬರೂ ಈಗಾಗ್ಲೇ ಮೃತಪಟ್ಟಿದ್ದಾರೆ. ಕೇಸ್ ನ ತನಿಖೆ ನಡೆಸುತ್ತಿದ್ದ ಅಧಿಕಾರಿ ಸಹ 1994ರಲ್ಲೇ ನಿವೃತ್ತರಾಗಿದ್ದರು. ಹಾಗಾಗಿ ಪ್ರಕರಣದ ತನಿಖೆ ಹಳಿತಪ್ಪಿತ್ತು.

ಅಬ್ದುಲ್ ಶೇಖ್ 1986ರ ಸಪ್ಟೆಂಬರ್ 28ರಂದು ಸಹಚರನ ಜೊತೆಗೂಡಿ ಚಿಕ್ಕಮ್ಮನ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆರೋಪವಿತ್ತು. ಅದಾದ್ಮೇಲೆ ತಲೆಮರೆಸಿಕೊಂಡಿದ್ದ ಆತ 5 ವರ್ಷಗಳ ಹಿಂದಷ್ಟೆ ಚೆಂಬೂರ್ ಗೆ ಮರಳಿದ್ದ. ಆಗ ಅವನನ್ನು ಬಂಧಿಸಲಾಗಿತ್ತು. ಇನ್ನೋರ್ವ ಆರೋಪಿ ಸೈಯ್ಯದ್ ಇಬ್ರಾಹಿಂ 2014ರಲ್ಲಿ ಮೃತಪಟ್ಟಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...