alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಬಳಿಯಿತ್ತು 18 ಲಕ್ಷ ರೂ. ಮೌಲ್ಯದ ಹೊಸ ನೋಟು

chandigarh-new-notes-gold-seized_650x400_81481968616ತಮಗೆ ಬಂದ ಖಚಿತ ಸುಳಿವಿನ ಮೇರೆಗೆ ಚಂಡೀಘಡದ ಖ್ಯಾತ ಟೈಲರ್ ಒಬ್ಬರಿಗೆ ಸೇರಿದ ಕಟ್ಟಡಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 30 ಲಕ್ಷ ರೂ. ನಗದು ಹಾಗೂ 2.5 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ 30 ಲಕ್ಷ ರೂ. ಪೈಕಿ 18 ಲಕ್ಷ ರೂ. 2000 ರೂ. ಮುಖಬೆಲೆಯ ನೋಟುಗಳಾಗಿದ್ದು, ಮಿಕ್ಕಿದ್ದು 100 ಹಾಗೂ 50 ರೂ. ನೋಟುಗಳು.

ಚಂಡೀಘಡ ಹಾಗೂ ಮೊಹಾಲಿಯಲ್ಲಿ ಮಹಾರಾಜ ಟೈಲರ್ ಎಂಬ ಹೆಸರಿನ ಅಂಗಡಿ ಹೊಂದಿದ್ದ ಈತ 10 ಗ್ರಾಂ ಚಿನ್ನಕ್ಕೆ 44 ಸಾವಿರ ರೂ. ಪಾವತಿಸಿದ್ದನೆಂದು ಹೇಳಲಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನೀಡಿರುವುದು ದಾಳಿ ಸಂದರ್ಭದಲ್ಲಿ ಲಭ್ಯವಾದ ರಶೀದಿಗಳ ಮೂಲಕ ತಿಳಿದುಬಂದಿದ್ದು, ಚಿನ್ನದ ಅಂಗಡಿಯಾತನ ವಿಚಾರಣೆಗೆ ಅಧಿಕಾರಿಗಳು ಈಗ ಮುಂದಾಗಿದ್ದಾರೆ.

2000 ರೂ. ಮುಖಬೆಲೆಯ 18 ಲಕ್ಷ ರೂ. ಪತ್ತೆಯಾಗಿರುವ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಗಳೂ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ನೆರವು ನೀಡಿರಬಹುದೆಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ ಚಂಡೀಘಡದ ಬಟ್ಟೆ ವ್ಯಾಪಾರಿಯೊಬ್ಬನ ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು 2.19 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದರು. ಈ ಪೈಕಿ 17.74 ಲಕ್ಷ ರೂ. ಹೊಸ 2000 ರೂ. ನೋಟುಗಳಾಗಿದ್ದು, ಇದಕ್ಕೆ ಸಹಕರಿಸಿದ್ದ ಖಾಸಗಿ ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬನನ್ನು ಬಂಧಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...