alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ವಿಸರ್ಜನೆ ವೇಳೆ ನಡೆಯಿತು ದುರಂತ

ಗಣಪತಿ ವಿಸರ್ಜನೆಗೆ ತೆರಳಿದ್ದ ವೇಳೆ ಮೂವರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪಾನಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಂಡಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರ ವಲಯದಲ್ಲಿದ್ದ ನೀರು ತುಂಬಿದ ಹೊಂಡಕ್ಕೆ ಗಣಪತಿ ಬಿಡುವ ವೇಳೆ ಕರಣ್ (15), ದಿಲೀಪ್ (16) ಹಾಗೂ ಸತ್ಯವೀರ್ (14) ಎಂಬ ಮೂವರು ಬಾಲಕರು ಆಯತಪ್ಪಿ ಬಿದ್ದಿದ್ದು, ಸುಮಾರು 80 ಅಡಿ ಆಳವಿದ್ದ ಹೊಂಡದಲ್ಲಿ ಸಿಲುಕಿಕೊಂಡಿದ್ದಾರೆ.

ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಳುಗು ತಜ್ಞರ ನೆರವಿನಿಂದ ಬಾಲಕರ ಮೃತದೇಹಗಳನ್ನು ಹೊರ ತೆಗೆಸಿದ್ದಾರೆ. ಮೂವರು ಅಪ್ರಾಪ್ತ ಬಾಲಕರ ಸಾವಿನಿಂದ ಗ್ರಾಮದಲ್ಲಿ ಈಗ ಶೋಕ ಮಡುಗಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...