alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ದರ್ಶನಕ್ಕೆ ಬಂದಾಗ ಸಿಕ್ಕಿ ಬಿದ್ದ ರೇಪ್ ಆರೋಪಿ

station-accused-sanjay-mulchandani-policeಅತ್ಯಾಚಾರವೆಸಗಿ ದುಬೈಗೆ ಪರಾರಿಯಾಗಿದ್ದ ಆರೋಪಿಯೊಬ್ಬ ಬರೋಬ್ಬರಿ ಮೂರು ವರ್ಷಗಳ ಬಳಿಕ ಸಿಕ್ಕಿ ಬಿದ್ದಿದ್ದಾನೆ. ಮಹಾರಾಷ್ಟ್ರದ ಶಿರಡಿಗೆ ದೇವರ ದರ್ಶನಕ್ಕೆಂದು ಪತ್ನಿ ಜೊತೆ ಬಂದಿದ್ದ ಸಂದರ್ಭದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಜೈಪುರದ ಸಂಜಯ್ ಮೂಲ್ ಚಂದಾನಿ ಎಂಬಾತ 2013 ರ ಏಪ್ರಿಲ್ ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ. ಸಂತ್ರಸ್ಥ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆದರೆ ಸಂಜಯ್ ದುಬೈಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.

ದುಬೈನಲ್ಲಿ ಉದ್ಯಮ ಸ್ಥಾಪಿಸಿ ಅಲ್ಲಿಯೇ ಭಾರತದ ಯುವತಿಯೊಬ್ಬಳ ಜೊತೆ ವಿವಾಹವಾಗಿದ್ದ ಸಂಜಯ್ ಭಾರತಕ್ಕೆ ಬಂದಿರಲಿಲ್ಲ. 2014 ರಲ್ಲಿ ಜೈಪುರ್ ನ್ಯಾಯಾಲಯ ಸಂಜಯ್ ನನ್ನು ಪರಾರಿಯಾಗಿರುವ ವ್ಯಕ್ತಿ ಎಂದು ಘೋಷಿಸಿ, ಆತನ ಬಂಧನಕ್ಕೆ ಆದೇಶಿಸಿತ್ತು.

ಜೈಪುರದಲ್ಲಿರುವ ಸಂಜಯ್ ಪೋಷಕರ ಮೇಲೆ ಒಂದು ಕಣ್ಣಿಟ್ಟಿದ್ದ ಪೊಲೀಸರಿಗೆ ಸಂಜಯ್ ಭಾರತಕ್ಕೆ ಬರುತ್ತಾನೆಂಬ ಮಾಹಿತಿ ಸಿಕ್ಕಿತ್ತು. ಸಂಜಯ್ ಪೋಷಕರು ಕರೆ ಮಾಡುತ್ತಿದ್ದ ದುಬೈ ಮೊಬೈಲ್ ನಂಬರನ್ನು ಪೊಲೀಸರು ಟ್ರ್ಯಾಕ್ ನಲ್ಲಿಟ್ಟಿದ್ದು, ದುಬೈನಲ್ಲಿ ಸ್ವಿಚಾಫ್ ಆಗಿದ್ದ ಮೊಬೈಲ್ ಕೆಲ ದಿನಗಳಿಂದ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿತ್ತು.

ದೈವ ಭಕ್ತನಾಗಿದ್ದ ಸಂಜಯ್, ಮಹಾರಾಷ್ಟ್ರದ ಶಿರಡಿಗೆ ಬಂದಿದ್ದು, ದರ್ಶನ ಮುಗಿಸಿಕೊಂಡು ವಾಪಾಸ್ ದುಬೈಗೆ ತೆರಳಲು ಸಿದ್ದನಾಗಿದ್ದ, ಆದರೆ ಆತನ ಚಲನವಲನವನ್ನು ಮೊಬೈಲ್ ಟ್ರ್ಯಾಕಿಂಗ್ ಮೂಲಕ ಗಮನಿಸುತ್ತಿದ್ದ ಪೊಲೀಸರು, ಅಂತಿಮವಾಗಿ ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯ ಎರಡು ದಿನಗಳ ಕಾಲ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...